Slide
Slide
Slide
previous arrow
next arrow

ಮಾ.14ಕ್ಕೆ ಶಿರಸಿಯಲ್ಲಿ ಮಾಸ್ಕೇರಿ ಸಾಹಿತ್ಯ ಉತ್ಸವ

300x250 AD

ಶಿರಸಿ: ಸಾಹಿತ್ಯ ಸಂಚಲನ ಶಿರಸಿ ಕಳೆದ ಎರಡು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಸಾಹಿತ್ಯಕ ಚಟುವಟಿಕೆಗಳನ್ನು ವಿಶಿಷ್ಟ ರೀತಿಯಲ್ಲಿ ಆಯೊಜಿಸುತ್ತಾ ಸಾಹಿತ್ಯ ವಲಯದಲ್ಲಿ ಸಂಚಲನವನ್ನು ಮೂಡಿಸುತ್ತಿದ್ದು, ಅಂರ್ಜಾಲಾಧಾರಿತ ಹಾಗೂ ವೇದಿಕೆ ಕಾರ್ಯಕ್ರಮಗಳೊಂದಿಗೆ ಹಿರಿಕಿರಿಯ ಬರಹಗಾರರಿಗೆ ವೇದಿಕೆಯನ್ನೊದಗಿಸಿ ಪ್ರೋತ್ಸಾಹಿಸುತ್ತಾ ಬಂದಿದೆ.

ಸಾಹಿತ್ಯ ಸಂಚಲನ ಶಿರಸಿ(ಉ.ಕ) ಯ ಎರಡನೇ ವರ್ಷದ ಪಾದಾರ್ಪಣೆಯ ಸವಿನೆನಪಿಗಾಗಿ ಮೇ.14, ರವಿವಾರ ಸಾಮ್ರಾಟ ಹೊಟೇಲ್‌ನ ವಿನಾಯಕ ಸಭಾಭವನದಲ್ಲಿ ಬೆಳಿಗ್ಗೆ 09:30 ಗಂಟೆಯಿಂದ ನಾಡಿನ ಹಿರಿಯ ಛಂದೋಬದ್ಧ ಕವಿ ದಿವಂಗತ ಶ್ರೀ ವೆಂ.ಭ.ವಂದೂರ ಅವರ ಸಂಸ್ಮರಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಮಾಸ್ಕೇರಿ ಎಮ್.ಕೆ. ನಾಯಕ ಅವರ ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದೆ.

ಹಿರಿಯ ಸಾಹಿತಿ ವನರಾಗ ಶರ್ಮ ಅವರ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಏರ್ಪಾಡಾಗಿದ್ದು, ಉದ್ಘಾಟಕರಾಗಿ ಖ್ಯಾತ ವಿಮರ್ಶಕರು ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡರು ಆಗಮಿಸಲಿದ್ದಾರೆ. ಮಾಸ್ಕೇರಿ ನಾಯಕರ “The Quest” ಹಾಗೂ “ಜನುಮ ಜನುಮಕೂ ನೀ” ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಗೌರವ ಅತಿಥಿಗಳಾಗಿ ಸಾಹಿತಿ ಎಲ್ ಆರ್ ಭಟ್, ಅತಿಥಿಗಳಾಗಿ ಸಾಹಿತಿ ಮನೋಹರ ಮಲ್ಮನೆ ಗೌರವ ಉಪಸ್ಥಿತಿಯಲ್ಲಿ ಮಾಸ್ಕೇರಿ ನಾಯಕ ಇರಲಿದ್ದಾರೆ ಮತ್ತು ಸಾಹಿತಿಗಳಾದ ಕೆ.ಆರ್.ಹೆಗಡೆ ಮತ್ತು ಅಶೋಕ ಹಾಸ್ಯಗಾರ ವರು ಕೃತಿಗಳನ್ನು ಪರಿಚಯಿಸಲಿದ್ದಾರೆ. ಬೆಳಿಗ್ಗೆ 11 ಘಂಟೆಯಿಂದ ಸಾಹಿತ್ಯ ವಲಯದ ಶಂಕರ ಮುಂಗರವಾಡಿ, ದತ್ತಗುರು ಕಂಠಿ, ಪ್ರೊ ಕೆ.ಎನ್. ಹೊಸ್ಮನಿಯವರ ಉಪಸ್ಥಿತಿಯಲ್ಲಿ ಗಮಕ ವಾಚನ ವ್ಯಾಖ್ಯಾನವಿದ್ದು, ಗಂಗಾ ಕೆ. ಹೆಗಡೆ ಗಮಕ ವಾಚನ ಮಾಡಲಿದ್ದು, ಗಣಪತಿ ಭಟ್ ವರ್ಗಾಸರ ವ್ಯಾಖ್ಯಾನಿಸಲಿದ್ದಾರೆ.

300x250 AD

ಭೋಜನ ವಿರಾಮದ. ನಂತರ ಪ್ರೊ.ಡಿ.ಎಮ್.ಭಟ್ ಕುಳವೆ ಅಧ್ಯಕ್ಷತೆಯಲ್ಲಿ ಮಾಸ್ಕೇರಿ ಕೃತಿಗಳ ಅವಲೋಕನ ಮತ್ತು ಕಾವ್ಯಧಾರೆ ನೆರವೇರಲಿದೆ. ಪ್ರಾಚಾರ್ಯರಾದ ಡಾ.ಮಂಜುನಾಥ ಭಟ್ ಅವರು ಮುಖ್ಯ ಅತಿಥಿಯಾಗಿ ಮಾಸ್ಕೇರಿ ಕಾವ್ಯ ನಾಟಕಗಳ ಕುರಿತು ಮಾತನಾಡಲಿದ್ದಾರೆ. ನಂತರ ಕಥೆಗಾರ ಡಿ.ಎಸ್.ನಾಯ್ಕರಿಂದ ಕರಿಕಂಬಳಿ ನಾಟಕ, ಡಾ.ಜಿ.ಎ.ಹೆಗಡೆ ಸೋಂದಾ ಅವರಿಂದ ಬೆವರು-ಬೆಳಕು, ಶಿವಲೀಲಾ ಹುಣಸಗಿಯವರಿಂದ ವಿಶ್ವಾತ್ಮಜ ಮತ್ತು ಪ್ರತಿಭಾ ಎಂ ನಾಯ್ಕರಿಂದ ದಾಂಡೇಲಿ ಬಾಗಿನ ಕೃತಿಗಳ ಅವಲೋಕನವಿದೆ.
ರಾಜಲಕ್ಷಿ ಭಟ್, ಪುಷ್ಪಾ ಮಾಳ್ಕೊಪ್ಪ, ವಿಮಲಾ ಭಾಗ್ವತ, ರೇಣುಕಾ ಭಟ್, ರೇವತಿ ಭಟ್, ರಾಜೇಶ್ವರಿ ಹೆಗಡೆ, ಜ್ಯೋತಿ ಹೆಗಡೆ, ಡಾ.ಕವಿತಾ ಹೆಬ್ಬಾರ, ಉಷಾಕಿರಣ ನಾಯ್ಕ, ರೋಹಿಣಿ ಹೆಗಡೆ ಅವರುಗಳು ಕಾವ್ಯಾಧಾರೆ ಹರಿಸಲಿದ್ದಾರೆ. ಸಂಜೆ 5 ಘಂಟೆಗೆ ಕಾರ್ಯಕ್ರಮ ಸಂಯೋಜಕರಾರ ಕೃಷ್ಣ ದತ್ತಾತ್ರೇಯ ಪದಕಿ, ಗಣಪತಿ ಭಟ್ ವರ್ಗಾಸರ, ಜಗದೀಶ ಭಂಡಾರಿ ಉಪಸ್ಥಿಯಲ್ಲಿ ಸಮಾರೋಪ ಸಮಾರಂಭವಿದೆ ಮಂಜುನಾಥ ಗಾಂವ್ಕರ ಬರ್ಗಿ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಒಟ್ಟಾರೆ ಕಾರ್ಯಕ್ರಮವನ್ನು ಸಾಹಿತ್ಯ ವಲಯದ ನಾಗರಾಜ ಜೋಶಿ, ಸುಜಾತಾ ಹೆಗಡೆ, ರಾಜು ಉಗ್ರಾಣಕರ, ಭವ್ಯಾ ಹಳೆಯೂರು,ಕೆ.ಎಸ್ ಅಗ್ನಿಹೋತ್ರಿ, ದಾಕ್ಷಾಯಿಣಿ ಪಿ.ಸಿ, ವಾಸುದೇವ ಶಾನಭಾಗ ಮತ್ತು ಸಮೀಕ್ಷಾ ಫಾಯ್ದೆ ನಿರ್ವಹಿಸಲಿದ್ದಾರೆ.
ವಿಶೇಷ ಆಮಂತ್ರಿತರಾಗಿ ರಾಜೀವ ಅಜ್ಜೀಬಳ, ಆರ್.ಡಿ.ಹೆಗಡೆ, ಎಸ್. ಎಸ್.ಭಟ್, ರಾಮಚಂದ್ರ ಕನಕ, ಡಾ.ಪ್ರಕಾಶ ನಾಯಕ, ಡಾ.ಆರ್.ಜಿ. ಚಿಕ್ಕಮಠ, ಪ್ರೊ ರಾಮ ಹರಿ ಕಿಣಿ, ಶಿವಪ್ರಸಾದ ಹಿರೆಕೈ, ವಿಶ್ವನಾಥ ಭಾಗ್ವತ, ಗಣಪತಿ ಕಂಚಿಪಾಲ್, ರಾಘವೇಂದ್ರ ಗಡಪ್ಪನವರ, ಮಹದೇವ ಮಾಸ್ತರ, ದೀಪಾಲಿ ಸಾಮಂತ, ಶಂಕರ ಭಟ್, ಮಂಜುನಾಥ ನಾಯ್ಕ, ಮುಕ್ತ ಶಂಕರ ಉಪಸ್ಥಿತರಿರಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದೆ.

Share This
300x250 AD
300x250 AD
300x250 AD
Back to top