ಬೆಂಗಳೂರು: ಸುಪ್ರಸಿದ್ಧ ಜಾಲತಾಣವಾದ ವಾಟ್ಸಾಪ್‌ನಲ್ಲಿ ಕೆಲವೊಮ್ಮೆ ನೀವು ಸೇವ್ ಮಾಡದ ನಂಬರ್‌ನಿಂದ ಕರೆ ಬರಬಹುದು, ಗೊತ್ತಿಲ್ಲದ ನಂಬರ್ ಆದರೂ ಯಾರೆಂದು ತಿಳಿಯುವ ಕುತೂಹಲಕ್ಕೆ ಕರೆ ಸ್ವೀಕರಿಸುತ್ತೇವೆ.
+ 254, +84, +63 ಈ ಸಂಖ್ಯೆಗಳಿಂದ ಆರಂಭವಾಗುವ ನಂಬರ್‌ನಿಂದ ನಿಮಗೆ ಈಗಾಗಲೇ ಕರೆ ಬಂದಿರಬಹುದು, ಅಥವಾ ಬರಬಹುದು, ಈ ಅಂತರಾಷ್ಟ್ರೀಯ ಸಂಖ್ಯೆಯಿಂದ ಕರೆ ಅಥವಾ ಮೆಸೇಜ್ ಬಂದರೆ ಅದನ್ನು ನಿರ್ಲಕ್ಷಿಸಬೇಡಿ, ಬದಲಿಗೆ ತಕ್ಷಣವೇ ಸಂಖ್ಯೆಯನ್ನು ರಿಪೋರ್ಟ್ ಬ್ಲಾಕ್ ಮಾಡಿ ಎಂದು ಸೈಬರ್‌ಕ್ರೈಮ್ ಸಮನ್ವಯ ಕೇಂದ್ರ ತಿಳಿಸಿದೆ.
ಈ ಬಗ್ಗೆ ಗೃಹ ಸಚಿವಾಲಯದ ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರ ಎಚ್ಚರಿಕೆ ನೀಡಿದ್ದು, ಕರೆಯನ್ನು ಸ್ವೀಕರಿಸಿ ಯಾರೂ ಸೈಬರ್ ಅಪರಾಧಕ್ಕೆ ಬಲಿಯಾಗದಿರಿ ಎಂದು ಹೇಳಿದೆ. ಈ ಕರೆಗಳು ಸಿಂಗಾಪೂರ್, ವಿಯೆಟ್ನಾಂ ಹಾಗೂ ಮಲೇಶಿಯಾದಿಂದ ಬರುತ್ತಿದ್ದು, ಕರೆ ಸ್ವೀಕರಿಸಿದ ತಕ್ಷಣವೇ ನಿಮ್ಮ ಹಣಕಾಸಿನ ಮಾಹಿತಿಯನ್ನು ಕಳವು ಮಾಡಲಾಗುತ್ತದೆ. ಈಗಾಗಲೇ ದತ್ತಾಂಶ ವಿಶ್ಲೇಷಣೆ ಹಾಗೂ ಫೋರೆನ್ಸಿಕ್ ತಜ್ಞರು ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಕ್ರೈಂ ಆಗದಂತೆ ತಡೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮುಖ್ಯದ ವಿಷಯವಾಗಿದೆ.
ಎಲ್ಲ ಅಂಶಗಳ ಬಗ್ಗೆ ನಿಗಾ: ಇದೊಂದು ನೂತನ ಸೈಬರ್ ಕ್ರೈಂ ಟ್ರೆಂಡ್ ಆಗಿದ್ದು, ದೇಶದಾದ್ಯಂತ ಸಾಕಷ್ಟು ಮಂದಿ ಈಗಾಗಲೇ ಕರೆಯನ್ನು ಸ್ವೀಕರಿಸಿ ಬಲಿಪಶುಗಳಾಗಿದ್ದಾರೆ. ಇತ್ತೀಚೆಗೆ ಈ ನಂಬರ್‌ನಿಂದ ಹೆಚ್ಚಿನ ಕರೆಗಳು ಬರುತ್ತಿದ್ದು, ಒಟ್ಟಾರೆ ಎಲ್ಲ ಅಂತಾರಾಷ್ಟ್ರೀಯ ಕರೆಗಳನ್ನು ರಿಪೋರ್ಟ್ ಮಾಡಿ ನಂತರ ಬ್ಲಾಕ್ ಮಾಡಬೇಕು ಎಂದು ಕೇಂದ್ರ ಹೇಳಿದೆ. ಯಾವ ಸಮಯದಲ್ಲಾದರೂ ಕರೆಗಳು ಬರಬಹುದು, ಬೆಳಗ್ಗೆ ಆರು ಗಂಟೆಯಿಂದ ತಡರಾತ್ರಿವರೆಗೂ ಕರೆಗಳು ಬರುತ್ತವೆ. ಈ ಕರೆಗಳನ್ನು ಸ್ವೀಕರಿಸುವವರು ಯಾರಾದರೂ ಆಗಿರಬಹುದು, ಬೆಳಗ್ಗೆ ಅಥವಾ ತಡರಾತ್ರಿ ಕರೆ ಬಂದಾಗ ಗಾಬರಿಯಿಂದ ಯೋಚಿಸದೇ ಕರೆಯನ್ನು ಸ್ವೀಕರಿಸಲಾಗುತ್ತದೆ. ಈ ಅಂಶಗಳ ಎಲ್ಲ ಮಾಡುವವರು ನಿಗಾ ಇಟ್ಟಿದ್ದಾರೆ. ಬಗ್ಗೆ ಕರೆ
ಮೆಸೇಜ್‌ನಲ್ಲಿ ಏನಿರುತ್ತದೆ?
ನನ್ನ ಹೆಸರು ಎಲೆನಾ, ಎರಡು ನಿಮಿಷ ನಿಮ್ಮ ಬಳಿ ಮಾತನಾಡಬಹುದಾ? ಈಗ 5ಜಿ ಯುಗ, ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸಿ ಸಾಕಷ್ಟು ಹಣ ಮಾಡಬಹುದು, ಈಗ ನೀವು ನನಗೆ ರಿಪ್ಲೇ ಮಾಡದಿದ್ದರೆ ಹಣ ಗಳಿಸುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೀರಿ, ಈ ರೀತಿ ಅವಕಾಶ ಮತ್ತೆ ಸಿಗೋದಿಲ್ಲ, ನನ್ನ ಮೆಸೇಜ್‌ಗೆ ರಿಪ್ಲೇ ಮಾಡಿ ಎನ್ನುವ ಸಂದೇಶ ರವಾನೆಯಾಗುತ್ತದೆ.
ಯಾರಾದರೂ ಸೈಬರ್ ಕ್ರೈಂಗೆ ತುತ್ತಾದರೆ ಗಾಬರಿಯಾಗದೆ ಸೈಬರ್ ಕ್ರೈಂ ವೆಬ್‌ಸೈಟ್‌ನಲ್ಲಿ ವರದಿ ಮಾಡಿ ಎಂದು ಹೇಳಿದ್ದಾರೆ. ಮೇಲೆ ನಮೂದಿಸಿದ ಸಂಖ್ಯೆಗಳಿಂದ ಕರೆ ಅಥವಾ ಮೆಸೇಜ್ ಬಂದರೆ ಗಾಬರಿಯಾಗಬೇಡಿ, ತಕ್ಷಣವೇ ಸಂಖ್ಯೆಯನ್ನು ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ, ಈ ಬಗ್ಗೆ ನಿಮಗೆ ತಿಳಿದವರಿಗೂ ಮಾಹಿತಿ ನೀಡಿ, ಫ್ರಾಡ್‌ಗಳಿಗೆ ಹಣ ಗಳಿಸುವ ಸುಲಭ ಅವಕಾಶ ನೀಡದಿರಿ.