ದಾಂಡೇಲಿ : ವಿಧಾನ ಸಬಾ ಚುನಾವಣೆಯ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿದ ನಗರದ ಹಳಿಯಾಳ ರಸ್ತೆಯ ಮೂರು ನಂ ಗೇಟಿನಿಂದ ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀ.ಛತ್ರಪತಿ ಶಿವಾಜಿ ಮೂರ್ತಿ ಆವರಣದವರೆಗೆ ಬೃಹತ್ ರೋಡ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಳಿಯಾಳ ರಸ್ತೆಯ ಮೂರು ನಂ ಗೇಟಿನಿಂದ ಆರಂಭಗೊ0ಡ ರ‍್ಯಾಲಿಯು ಕೆ.ಸಿ.ವೃತ್ತದ ಹತ್ತಿರ ಬರುತ್ತಿದ್ದಂತೆಯೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಅವರು ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಗೌರವವನ್ನು ಸಲ್ಲಿಸಿದರು. ಅಲ್ಲಿಂದ ಮುಂದಕ್ಕೆ ಸಾಗಿ ಪಟೇಲ್ ವೃತ್ತದÀ ಹತ್ತಿರ ಬರುತ್ತಿದ್ದಂತೆಯೆ ಶ್ರೀ.ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾಪಣೆಯನ್ನು ಮಾಡಿ ಭಕ್ತಿ ಸಮರ್ಪಿಸಿದ ಎಸ್.ಎಲ್.ಘೋಟ್ನೇಕರ್ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು.
ಮೆರವಣಿಗೆಯ ಉದ್ದಕ್ಕೂ ಜೈಕಾರ, ಘೋಷಣೆಗಳು ಮೊಳಗಿದವು. ನಗರದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯ್ತು. ಕೊನೆಯಲ್ಲಿ ಸೋಮಾನಿ ವೃತ್ತಕ್ಕೆ ಬಂದು ತಲುಪಿದ ಮೆರವಣಿಗೆಯು ಅಲ್ಲಿ ಶ್ರೀ.ಛತ್ರಪತಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಿ ಪೂಜೆ ಸಲ್ಲಿಸಿ, ಸಂಪನ್ನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ್ ಅವರು ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿದ್ದೇ ಕ್ಷೇತ್ರ ಜನತೆಗಾಗಿ, ಜನಸೇವಕವಾಗಿ ಸೇವೆ ಮಾಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮುನ್ನೋಟವನ್ನಿಟ್ಟುಕೊಂಡು, ಹತ್ತು ಹಲವು ಎಡರು ತೊಡರುಗಳನ್ನು ದಾಟಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಿಮ್ಮೆಲ್ಲರ ಅಮೂಲ್ಯ ಮತ ನೀಡುವುದಷ್ಟೆ ಅಲ್ಲದೇ ನಿಮ್ಮವರ ಮತವನ್ನು ಜೆಡಿಎಸ್ ಪಕ್ಷಕ್ಕೆ ಹಾಕಿಸುವ ಮೂಲಕ ಪಕ್ಷದ ಗೆಲುವಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಘೋಟ್ನೇಕರ್ ಅವರ ಸುಪುತ್ರಿ ಸ್ಮಿತಾ ಘೋಟ್ನೇಕರ್, ಜೆಡಿಎಸ್ ರಾಜ್ಯ ಕರ‍್ಯದರ್ಶಿ ರೋಷನ್ ಬಾವಾಜಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಅಕ್ರಂ ಖಾನ್, ಪಕ್ಷದ ಮುಖಂಡರುಗಳಾದ ವಾಮನ್ ಮಿರಾಶಿ, ವಿಶ್ವನಾಥ್ ಜಾಧವ್, ರವಿ ಅರ್ಮುಗಂ, ದಿನೇಶ್ ಹಳದುಕರ್, ಮಹೇಶ್ ಸಾವಂತ್, ನಾರಾಯಣ ಪಾಟೀಲ್, ಗಣಪತಿ ಬೇಕನಿ, ಮಾರುತಿ ಕಾಮ್ರೇಕರ್, ಚಂದ್ರಹಾಸ್ ಪೂಜಾರಿ, ಮಹಾವೀರ ನೇರ್ಲೆಕರ್, ಸಲೀಂ ಕಾಕರ್, ಮಹಮ್ಮದ್ ಗೌಸ್ ಬೆಟಗೇರಿ, ಯಲ್ಲಪ್ಪ ಮಾಳವನಕರ್, ಸಂತೋಷ್ ಸೋಮನಾಚೆ, ಸಲೀಂ ನಾಯ್ಕವಾಡಿ, ಉಮರ್ ಶೇಖ್, ರಾಹುಲ್ ಲೋಕಾಂಡೆ, ರಾಘವೇಂದ್ರ ಪಾಟೀಲ್, ಶಬ್ಬೀರ್ ತಾಡಪತ್ರಿ, ರೀನಾ, ಶಾನವಾಜ್ ಕಾಕರ್, ನಮಿತಾ ಹಳದುಕರ್, ಉದಯ್ ರಜಪೂತ್, ನೀತಾ ಹಳದುಕರ್ ಮೊದಲಾದವರು ಉಪಸ್ಥಿತರಿದ್ದರು.