ಅಂಕೋಲಾ: ಕರ್ನಾಟಕ ಬ್ಯಾಂಕ್ ಅಂಕೋಲಾ ಶಾಖೆಯ ವ್ಯವಸ್ಥಾಪಕರಾಗಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಶಿರಸಿಗೆ ವರ್ಗಾವಣೆಗೊಂಡಿರುವ ಪರಮೇಶ್ವರ ಹೆಗಡೆಯವರನ್ನು ರೂರಲ್ ರೋಟರಿ ಕ್ಲಬ್‌ನಿಂದ ಬ್ಯಾಂಕ್‌ಗೆ ತೆರಳಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್ ಹೆಗಡೆ, ಕಳೆದ ನಾಲ್ಕು ವರ್ಷಗಳಿಂದ ರೂರಲ್ ರೋಟರಿ ಕ್ಲಬ್‌ನ ಗೌರವ ಸದಸ್ಯನಾಗಿ ಕೆಲಸ ಮಾಡಿರುವುದು ನನಗೆ ತೃಪ್ತಿ ತಂದಿದೆ. ಬಿಡುವಿನ ಅವಧಿಯಲ್ಲಿ ಕ್ಲಬ್‌ನ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾರ್ಥಕ ವೆನಿಸಿದೆ. ಕ್ಲಬ್‌ನ ಸರ್ವ ಸದಸ್ಯರ ಸಹಕಾರ ಹಾಗೂ ಅಂಕೋಲೆ ಜನತೆಯ ಪ್ರೀತಿ, ಸಹಕಾರ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ರೂರಲ್ ರೋಟರಿ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಪರಮೇಶ್ವರ್ ಹೆಗಡೆಯವರು ನಮ್ಮ ಕ್ಲಬ್‌ನ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ವರ್ಗಾವಣೆ ಗೊಂಡಿರುವುದು ನಮಗೂ ಬೇಸರ ತಂದಿದೆ ಎಂದರು. ರೂರಲ್ ರೋಟರಿ ಕಾರ್ಯದರ್ಶಿ ಪ್ರವೀಣ ಶೆಟ್ಟಿ ಮಾತನಾಡಿ ವರ್ಗಾವಣೆ ಎನ್ನುವುದು ಒಂದು ಸಹಜ ಪ್ರಕ್ರಿಯೆ, ನಾಲ್ಕು ವಷÀðಗಳಿಂದ ನಮ್ಮ ಕ್ಲಬ್‌ನ ಕಾರ್ಯ ಕಲಾಪಗಳಲ್ಲಿ ಚುರುಕುತನದಿಂದಲೇ ಭಾಗವಹಿಸುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ರೂರಲ್ ರೋಟರಿ ಕ್ಲಬ್‌ನ ಸದಸ್ಯರಾದ ಡಾ.ಸಂಜು ನಾಯಕ, ವಿನಾಯಕ ಕಾಮತ್, ಸಂತೋಷ ಕೇಣಿಕರ, ಸಚಿನ ಶೆಟ್ಟಿ, ರವಿ ನಾಯಕ, ಮಹೇಶ ಪೈ, ಶಿವಾನಂದ ನಾಯಕ ಹಾಗೂ ಕರ್ನಾಟಕ ಬ್ಯಾಂಕ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.