ಶಿರಸಿ: ಹಿಂದೂ ಮಹಾಸಭಾ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾದ ಗೋಪಾಲ ದೇವಾಡಿಗ ಶಿರಸಿ ನಗರದ ಮಾರಿಕಾಂಬಾ ದೇವಸ್ಥಾನದ ಬೀದಿ, ಮರಾಟಿ ಕೊಪ್ಪ, ಐದು ರಸ್ತೆ, ಶ್ರದ್ಧಾನಂದ ಗಲ್ಲಿ ಸೇರಿದಂತೆ ನಗರದ ವಿವಿಧ ಬೀದಿಗಳಲ್ಲಿ ಅಂಗಡಿ, ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಪ್ರಮುಖರಾದ ವಿಠ್ಠಲ ಪೈ, ಶ್ರೀನಿವಾಸ ಪೂಜಾರಿ, ಸತೀಶ್ ಕುಮಟಾಕರ, ಪಂಚಾಕ್ಷರಿ, ಕೇಶವ ನಾಯ್ಕ, ಮಂಜುನಾಥ ಪಡ್ಡಿ, ಪ್ರಕಾಶ್ ಜಾಲಿ, ಸೇರಿದಂತೆ ಅಪಾರ ಬೆಂಬಲಿಗರು ಪಾಲ್ಗೊಂಡಿದ್ದರು.