• Slide
    Slide
    Slide
    previous arrow
    next arrow
  • SSLC Result: ಸ್ನೇಹಸಾಗರ ಪ್ರೌಢಶಾಲೆ ಉತ್ತಮ ಫಲಿತಾಂಶ

    300x250 AD

    ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ ಉತ್ತಮ ಫಲಿತಾಂಶವನ್ನು ಗಳಿಸಿದೆ. ವಾರ್ಷಿಕ ಪರೀಕ್ಷೆಗೆ ಕುಳಿತ ಒಟ್ಟು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    ಇವರಲ್ಲಿ 09 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 09 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 2 ವಿದ್ಯಾರ್ಥಿ ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ. 598 ಅಂಕ ಪಡೆದ ಪ್ರಜ್ವಲ್ ಎಂ.ಕೆ (ಶೇ.95.68%), 592 ಅಂಕ ಪಡೆದ ಕು. ಸಾಕ್ಷಿ ಆರ್. ಎ (ಶೇ. 94.72%), 576 ಅಂಕ ಪಡೆದ ಸಹನಾ ಸಿ.(ಶೇ. 92.16%), 574 ಅಂಕ ಪಡೆದ ಅಧಿತಿ ಕುಲಕರ್ಣಿ (ಶೇ.91.84%), 569 ಅಂಕ ರೋಹನ್ ಎನ್. ಶಿರಗುಪ್ಪಿ (ಶೇ. 91.04%) ಅನುಕ್ರಮವಾಗಿ ಮೊದಲ 05 ಸ್ಥಾನವನ್ನು ಗಳಿಸಿದ್ದಾರೆ.

    300x250 AD

    ಈ ಮೂಲಕ ಶಾಲೆಯ ಶ್ರೇಯಸ್ಸನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಎಲ್ ಭಟ್ ಮಕ್ಕಳ ಸಾಧನೆಯನ್ನು ಮೆಚ್ಚಿ ಮಕ್ಕಳ ಮುಂದಿನ ವಿದ್ಯಾಭ್ಯಾಸವು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಹಾರೈಸಿದರು ಹಾಗೂ ಶಾಲಾ ಆಡಳಿತಾಧಿಕಾರಿ ಎನ್. ಎ. ಭಟ್, ಪ್ರಾಂಶುಪಾಲರಾದ ಶ್ರೀ ಸಿದ್ದೇಶ ಎ. ಎಸ್. ಮುಖ್ಯಶಿಕ್ಷಕವೃಂದ, ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಶುಭಕೋರಿ ಸಂತಸ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top