Slide
Slide
Slide
previous arrow
next arrow

SSLC ರಿಸಲ್ಟ್: ಗೋಳಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ತಾಲೂಕಿನ ಗೋಳಿಯ ಸಿದ್ಧಿವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕೆಯಲ್ಲಿ ಉತ್ತಮ ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ 30 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತೀರ್ಣತಾ ಪ್ರಮಾಣ ಶೇಕಡಾ 86.66 ಆಗಿದೆ. ಗುಣಾತ್ಮಕ ಶಿಕ್ಷಣ ಫಲಿತಾಂಶದಲ್ಲಿ79.45% ಸಾಧನೆ ಮಾಡಿದ್ದು “ಎ” ಶ್ರೇಣಿಯನ್ನು ಗಳಿಸಿ ಸಾಧನೆ ಮಾಡಿದೆ.ಕುಮಾರಿ ಅನನ್ಯ ಮಹೇಂದ್ರ ಹೆಗಡೆ ಅಮ್ಮಚ್ಚಿಇವಳು 96.48% (603/625) ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು, ಕುಮಾರಿ ಅನ್ವಿತಾ ಮಹೇಶ ಭಟ್ಟ ನಾಡಗುಳಿ ಇವಳು ಶೇ 92.64%(579/625) ಪ್ರತಿಶತ ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನವನ್ನು, ಕುಮಾರಿತೇಜಸ್ವಿನಿ ಚಂದ್ರಶೇಖರ ಮಡಿವಾಳ ಕೊಂಬೇಸರ ಇವಳು ಶೇ 88.64%(554/625) ಪ್ರತಿಶತ ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.ಈ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷ ಎಮ್‌.ಎಲ್. ಹೆಗಡೆ ಹಲಸಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಾರಾಯಣ ದೈಮನೆ ಮತ್ತು ಶಿಕ್ಷಕ-ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top