ಶಿರಸಿ: 2022-23 ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರ‍್ಯಾಂಕ್ ಸಂಸ್ಕೃತಿಯುನ್ನು ಮುಂದುವರೆಸಿದ್ದಾರೆ.
625 ಕ್ಕೆ 616 ಅಂಕಗಳಿಸಿದ ರವಿನಾ ಪನ್ವಾರ ರಾಜ್ಯಮಟ್ಟದಲ್ಲಿ 10 ನೇ ರ‍್ಯಾಂಕ್ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
613 ಅಂಕ ಗಳಿಸಿರುವ ಕ್ಷಿತಿ ಹೆಗಡೆ, ಶ್ರೀಲಕ್ಷ್ಮೀ ಹೆಗಡೆ ಹಾಗೂ ವಾದಿರಾಜ ಚಪ್ಪರ ಶಾಲೆಗೆ ದ್ವಿತೀಯ ಸ್ಥಾನ, 609 ಅಂಕಗಳಿಸಿರುವ ಪ್ರಾಚಿ ಗಾಂವ್ಕರ ಶಾಲೆಗೆ ತೃತೀಯ ಸ್ಥಾನಗಳಿಸಿರುತ್ತಾರೆ. 608 ಅಂಕಗಳಿಸಿರುವ ಸ್ಪೂರ್ತಿ ಸುಬ್ರಾಯ ಹೆಗಡೆ ಶಾಲೆಗೆ ನಾಲ್ಕನೇಯ ಸ್ಥಾನ, 607 ಅಂಕಗಳೊಂದಿಗೆ ಆದಿತ್ಯ ರಾಜೇಂದ್ರ ಜೋಶಿ ಶಾಲೆಗೆ ಐದನೇಯ ಸ್ಥಾನ ಪಡೆದಿರುತ್ತಾರೆ.
ಶಾಲೆಯಿಂದ ಪರೀಕ್ಷೆಗೆ ಕುಳಿತ 90 ವಿದ್ಯಾರ್ಥಿಗಳಲ್ಲಿ 95 ಪ್ರತಿಶತಕ್ಕಿಂತ ಅಧಿಕ ಅಂಕಗಳನ್ನು 16 ವಿದ್ಯಾರ್ಥಿಗಳು, 90% ಅಧಿಕ ಅಂಕಗಳನ್ನು 34 ವಿದ್ಯಾರ್ಥಿಗಳು, 85% ಅಧಿಕ ಅಂಕಗಳನ್ನು 44 ವಿದ್ಯಾರ್ಥಿಗಳು ಪಡೆದಿದ್ದು, ಪ್ರಥಮ ವರ್ಗದಲ್ಲಿ 83 ವಿದ್ಯಾರ್ಥಿಗಳು, ದ್ವಿತೀಯ ವರ್ಗದಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.ಶಾಲೆಯ ಪರಿಮಾಣಾತ್ಮಕ ಫಲಿತಾಂಶ 94.44% ಹಾಗೂ ಗುಣಾತ್ಮಕ ಫಲಿತಾಂಶ 81.89% ಆಗಿದ್ದು A ಗ್ರೇಡ್ ಫಲಿತಾಂಶದ ಸಾಧನೆ ಮೆರೆದಿದೆ.A + ಶ್ರೇಣಿ 34 ವಿದ್ಯಾರ್ಥಿಗಳು, A ಶ್ರೇಣಿ 25 ವಿದ್ಯಾರ್ಥಿಗಳು ಪಡೆದಿರುತ್ತಾರೆ. ವಿಷಯವಾರು ಇಂಗ್ಲೀಷ್‌ನಲ್ಲಿ 4, ಕನ್ನಡ 21, ಹಿಂದಿ 7, ಸಂಸ್ಕೃತ 10, ಗಣಿತ 1, ಸಮಾಜ ವಿಜ್ಞಾನದಲ್ಲಿ ಓರ್ವ ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಪ್ರಥಮ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಸಂಸ್ಕೃತ ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇ 100ಕ್ಕೆ 100 ವಿದ್ಯಾರ್ಥಿಗಳು ಉತ್ತೀರ್ಣತೆ ದಾಖಲಿಸಿದ್ದಾರೆ
ಈ ಸಾಧನೆಗೆ ಆಡಳಿತ ಮಂಡಳಿಯು ಸಾಧಕ ವಿದ್ಯಾರ್ಥಿಗಳನ್ನು, ಪಾಲಕರನ್ನು, ಶಿಕ್ಷಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು ಅಭಿನಂದಿಸಿದೆ.