Slide
Slide
Slide
previous arrow
next arrow

ಸತತ 11 ನೇ ಬಾರಿ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ಚಂದನ ಪ್ರೌಢಶಾಲೆ

300x250 AD

ಶಿರಸಿ:ಎಪ್ರಿಲ್ 2023 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಲ್ಲಿನ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂರಕ್ಕೆ ನೂರು ಫಲಿತಾಂಶ ಮತ್ತು ರಾಜ್ಯ ಮಟ್ಟದ 7 ನೇ ರ‍್ಯಾಂಕ್ ಸಾಧಿಸಿದೆ. ಸತತ 11 ನೇ ಬಾರಿಯ ನೂರಕ್ಕೆ ನೂರರ ಫಲಿತಾಂಶದ ಸಾಧನೆಯಾಗಿರುವುದು ವಿಶೇಷವಾಗಿದೆ.

ಪರೀಕ್ಷೆಗೆ ಕುಳಿತ 68 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಮತ್ತು 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಪ್ರೀತಾ ಎನ್ (619/625 ,99.04%) ಶಾಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ, ಇಂಚರಾ ಹೆಗಡೆ – (615/625,98.40%) ಶಾಲೆಗೆ ದ್ವಿತೀಯ ,ಸಂಭ್ರಮಾ ಹೆಗಡೆ (613/625,98.08%) ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top