• Slide
    Slide
    Slide
    previous arrow
    next arrow
  • ಹಿಂದೂ ಸಂಘಟನೆ ನಿಷೇಧ ಎಂದಿಗೂ ಸಾಧ್ಯವಿಲ್ಲ: ಗಿರೀಶ್ ಗೋಸಾವಿ

    300x250 AD

    ಜೋಯಿಡಾ: ಹಿಂದೂ ಸಂಘಟನೆ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧ ಮಾಡುತ್ತೇನೆ ಎನ್ನುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಅವರ ಹೇಳಿಕೆ ಸರಿಯಲ್ಲ, ಇದಕ್ಕೆ ಹಿಂದುಗಳ ತೀವ್ರ ವಿರೋಧವಿದೆ ಎಂದು ಜೋಯಿಡಾ ಹಿಂದೂ ಸಂಘಟನೆಯ ಅಧ್ಯಕ್ಷ ಗಿರೀಶ್ ಗೋಸಾವಿ ಹೇಳಿದರು.
     

      ರಾಜ್ಯದ ಕಾಂಗ್ರೆಸ್ ಪಕ್ಷದ ಮುತ್ಸದ್ದಿ ನಾಯಕ ಡಿ.ಕೆ. ಶಿವಕುಮಾರ್ ತಮ್ಮ ಭಾಷಣದಲ್ಲಿ ಭಜರಂಗದಳ ಮತ್ತು ಕೆಲ ಹಿಂದೂ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬ ಮಾತುಗಳನ್ನು ಆಡಿದ್ದಾರೆ. ಇದನ್ನು ನಮ್ಮ ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತದೆ ಅಲ್ಲದೇ ಚುನಾವಣಾ ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷದವರು ಒಡೆದು ಆಳುವ ನೀತಿಯನ್ನು ಉಪಯೋಗಿಸುತ್ತಾರೆ,ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೇಶದಲ್ಲಿ ಎಲ್ಲಾ ಜನರನ್ನು ಒಂದೇ ದೃಷ್ಟಿಯಿಂದ ನೋಡಿದ್ದಾರೆ ಆದರೆ ಕಾಂಗ್ರೆಸ್ ನವರು ಮಾತ್ರ ಈ ರೀತಿಯಾಗಿ ಒಡೆದು ಆಳುವ ನೀತಿಯನ್ನು ಮಾಡುತ್ತಿದ್ದಾರೆ.
       ಹಿಂದೂ ಸಂಘಟನೆ ಮತ್ತು ಭಜರಂಗದಳ ಸಂಘಟನೆಗಳ ನಿಷೇಧ ಎಂದಿಗೂ ಸಾಧ್ಯವಿಲ್ಲ ಇದು ಹಿಂದೂ ರಾಷ್ಟ್ರ ಎಚ್ಚರವಿರಲಿ ಎಂದು ಗಿರೀಶ್ ಗೋಸಾವಿ ಹೇಳಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top