Slide
Slide
Slide
previous arrow
next arrow

ಬಡವರ ಕಣ್ಣೀರು ಒರೆಸುವ ಕಾಂಗ್ರೆಸ್’ಗೆ ಮತ ನೀಡಿ: ನಿಗರ್ ಬಾರಸ್ಕರ್

300x250 AD

ದಾಂಡೇಲಿ : ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ವೀಕ್ಷಕರಾದ ನಿಗರ್ ಬಾರಸ್ಕರ್ ನಗರಕ್ಕೆಭೇಟಿ ನೀಡಿ, ನಗರದ ವಿವಿಧ ವಾರ್ಡ್ಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ವಿ. ದೇಶಪಾಂಡೆಯವರ ಪರ ಪ್ರಚಾರ ನಡೆಸಿದರು.

ಕಾಂಗ್ರೆಸ್ ಪ್ರಚಾರ ಸಂದರ್ಭದಲ್ಲಿ ಮತದಾರ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ನಿಗರ್ ಬಾರಸ್ಕರ್, ಬಿಜೆಪಿ ಸರಕಾರ ಏನು ಮಾಡಿದೆ ಎನ್ನುವುದನ್ನು ನಾವು ವಿವರಿಸುವ ಅಗತ್ಯವೆ ಇಲ್ಲ. ಯಾಕೆಂದರೇ ಈಗಾಗಲೆ ನೀವೆಲ್ಲರೂ ಸಂಕಷ್ಟವನ್ನು ಅನುಭವಿಸಿದ್ದೀರಿ. ಈ ನಿಟ್ಟಿನಲ್ಲಿ ಬಡವರ ಕಣ್ಣೀರನ್ನು ಒರೆಸುವ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ ಮಾತನಾಡಿ ಆರ್.ವಿ.ದೇಶಪಾಂಡೆಯವರು ನಮ್ಮ ಕ್ಷೇತ್ರದ ಬಹುದೊಡ್ಡ ಶಕ್ತಿ. ಎಂತಹದ್ದೆ ಸಮಸ್ಯೆಗಳು ಬಂದಾಗಲೂ ಕ್ಷಣಮಾತ್ರದಲ್ಲೆ ಸಮಸ್ಯೆಯನ್ನು ಪರಿಹರಿಸಲು ಸುಯೋಗ್ಯ ವ್ಯಕ್ತಿ ದೇಶಪಾಂಡೆಯವರು. ಕ್ಷೇತ್ರ ಭವಿಷ್ಯದ ಉನ್ನತಿಗಾಗಿ ಅವರು ನೀಡಿದ ಕೊಡುಗೆಗಳನ್ನು ನಾವು ಎಂದಿಗೂ ಮರೆಯುವಂತಿಲ್ಲ. ಅವರ ಅವಿಶ್ರಾಂತ ಸೇವೆಗೆ ಅವರಿಗೆ ಅಮೂಲ್ಯ ಮತ ನೀಡಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಮೌಲಾಲಿ ಮುಲ್ಲಾ, ಪಕ್ಷದ ಮುಖಂಡರು, ಪಕ್ಷದ ಮಹಿಳಾ ಪ್ರಮುಖರು, ಕಾರ‍್ಯಕರ್ತರು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top