• Slide
  Slide
  Slide
  previous arrow
  next arrow
 • ದಾಂಡೇಲಿಯಲ್ಲಿ ಅಂತರಾಷ್ಟ್ರೀಯ ಚಿರತೆ ದಿನಾಚರಣೆ

  300x250 AD

  ದಾಂಡೇಲಿ: ಕರ್ನಾಟಕ ಅರಣ್ಯ ಇಲಾಖೆ ಕೆನರಾ ವೃತ್ತ, ಹಳಿಯಾಳ ವಿಭಾಗ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ನಗರದ ಹಳೆದಾಂಡೇಲಿಯ ಹಾರ್ನ್ ಬಿಲ್ ಸಭಾಭವನದಲ್ಲಿ ಅಂತರರಾಷ್ಟ್ರೀಯ ಚಿರತೆ ದಿನಾಚರಣೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

  ಕಾರ‍್ಯಕ್ರಮವನ್ನು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ ಉದ್ಘಾಟಿಸಿ ಮಾತನಾಡಿ, ಚಿರತೆಯು ಈ ಭೂಮಿಯ ಮೇಲಿನ ಅತ್ಯಂತ ವೇಗದ ಸಸ್ತನಿ ಎನ್ನುವುದನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಚಿರತೆಗಳು ಪ್ರಪಂಚದ ವನ್ಯಜೀವಿಗಳ ಅತ್ಯಂತ ಮಹತ್ವದ ಭಾಗಗಳಲ್ಲಿ ಒಂದಾಗಿದ್ದರೂ ಸಹ ಈಗ ಅಳಿವಿನ ಅಂಚಿನಲ್ಲಿವೆ. ಈ ನಿಟ್ಟಿನಲ್ಲಿ ಚಿರತೆಗಳ ಪ್ರಾಮುಖ್ಯತೆ ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸಲು ಚಿರತೆ ದಿನಾಚರಣೆ ಪರಿಣಾಮಕಾರಿಯಾಗಿದೆ ಎಂದರು.

  ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಳಿಯಾಳ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್ ಬಾಲಚಂದ್ರ ಅವರು ದೇಶದಲ್ಲೆ ಜೀವವೈವಿದ್ಯತೆಯ ಹಾಟ್‌ಸ್ಪಾಟ್ ಆಗಿ ಕರ್ನಾಟಕ ಗಮನ ಸೆಳೆದಿದೆ. ಅದರಲ್ಲಿಯೂ ವಿಶೇಷವಾಗಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಅನೇಕ ಜಾತಿಯ ಜೀವವೈವಿದ್ಯತೆಗಳಿದ್ದು, ಇದು ಇಲ್ಲಿಯ ಸಮೃದ್ದ ಪರಿಸರದ ಕಂಪನ್ನು ಜಗತ್ತಿಗೆ ಸಾರುತ್ತಿದೆ. ವನ್ಯಪ್ರಾಣಿಗಳ ಪೈಕಿ ಚಿರತೆಯು ತನ್ನ ಆದ ವೈಶಿಷ್ಟ್ಯತೆಯನ್ನು ಹೊಂದಿರುವ ವನ್ಯಪ್ರಾಣಿಯಾಗಿದೆ. ಚಿರತೆಗಳ ಉಳಿವಿಗಾಗಿ ಜನಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಚಿರತೆ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ. ವನ್ಯ ಹಾಗೂ ವನ್ಯಪ್ರಾಣಿಗಳ ಸಂರಕ್ಷಣೆಯ ವಿಚಾರದಲ್ಲಿ ಅರಣ್ಯ ಮತ್ತು ವನ್ಯ ಇಲಾಖೆಯ ಜೊತೆಗೆ ನಾಗರಿಕ ಸಮಾಜ ಕೈ ಜೋಡಿಸಿದಾಗ ಸಮೃದ್ದ ಅರಣ್ಯ, ಸ್ವಚ್ಚಂದ ವನ್ಯಜೀವಿಗಳ ಬದುಕು ಮತ್ತಷ್ಟು ಸಂವರ್ಧನೆಗೊಳ್ಳಲು ಸಾಧ್ಯ ಎಂದರು.

  300x250 AD

  ವೇದಿಕೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ.ಕೆ.ಶೇಟ್, ಕೆ.ಡಿ.ನಾಯ್ಕ ಮತ್ತು ವಿನುತಾ ಚೌವ್ಹಾಣ್ ಉಪಸ್ಥಿತರಿದ್ದರು.ಕರ‍್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಯವರೊಂದಿಗೆ ಸಂವಾದ ನಡೆಯಿತು. ಕಾರ‍್ಯಕ್ರಮದಲ್ಲಿ ಹಳಿಯಾಳ ಉಪ ವಿಭಾಗದ ವಲಯಾರಣ್ಯಾಧಿಕಾರಿಗಳು, ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು. ಜಿ.ಕೆ.ಶೇಟ್ ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ಕೆ.ಡಿ.ನಾಯ್ಕ ವಂದಿಸಿದರು. ವಲಯಾರಣ್ಯಾಧಿಕಾರಿ ಬಸವರಾಜ್ ಅವರು ಕಾರ‍್ಯಕ್ರಮವನ್ನು ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top