ಕಾರವಾರ: ಕಾಂಗ್ರೆಸ್ ಮತಾಂಧ ಟಿಪ್ಪು ಬೆಂಬಲಿಸುವ ಪಕ್ಷ. ಬಿಜೆಪಿ ವೀರ ಸಾವರ್ಕರ್ ಸಿದ್ಧಾಂತ ಬೆಂಬಲಿಸುವ ಪಕ್ಷ. ಸಂಘದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ನೀಡಲ್ಲ ಎಂದು ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ನಾಗರಾಜ ಜೋಷಿ ಹೇಳಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು, ಬಿಜೆಪಿಗರು ಪ್ರಚಾರಕ್ಕಿಳಿಯದೆ ಕಾಂಗ್ರೆಸ್‌ಗೆ ಬೆಂಬಲಿಸುತ್ತಾರೆ0ಬ ಗುಮಾನಿಯನ್ನ ಕೆಲವರು ಹರಡುತ್ತಿದ್ದಾರೆ. ಆದರೆ ಹಿಂದೂ ವಿರೋಧಿ ಕಾಂಗ್ರೆಸ್‌ಗೆ ನಾವು ಯಾವತ್ತೂ ಬೆಂಬಲ ಕೊಡುವುದಿಲ್ಲ ಎಂದರು.
ಕಾ0ಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಹಿಂದುತ್ವವಾದಿ ಎನ್ನುತ್ತಾರೆ. ಹಾಗಿದ್ದರೆ ಅವರು ಟಿಪ್ಪು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದು ಹೇಗೆ ಎನ್ನುವುದನ್ನ ಸ್ಪಷ್ಟಪಡಿಸಬೇಕು. ಅವರು ವೀರ ಸಾವರ್ಕರ್‌ನ ಬೆಂಬಲಿಸುತ್ತಾರಾ ಅಥವಾ ಮತಾಂಧ ಟಿಪ್ಪುವನ್ನ ಬೆಂಬಲಿಸುತ್ತಾರಾ ಎಂದು ಹೇಳಲಿ. ಬಾಬರ್ ನ ಸಂತತಿಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ. ಕಾರವಾರದ ಜನತೆ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕು. ಬಿಜೆಪಿಯ ಒಂದು ಮತ ಕೂಡ ಹಿಂದೂಗಳ ಅಸ್ತಿತ್ವಕ್ಕೆ ಕೊಡುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುತ್ವದ ಅಸ್ತಿತ್ವ ಅಳಿಯುತ್ತದೆ ಎಂದರು.
ಸಿದ್ದರಾಮಯ್ಯ ಹಿಂದುತ್ವದ ವಿರೋಧಿ ಎಂದು ಅವರೇ ಹೇಳಿಕೊಳ್ಳುತ್ತಾರೆ. ಸ್ವಾಭಿಮಾನಿ ಹಿಂದುಗಳು ಜಾಗೃತರಾಗಿದ್ದಾರೆ. ಹಿಂದೂ ವಿರೋಧಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವನ್ನ ಹಿಂದೂಗಳು ಯಾವತ್ತೂ ಬೆಂಬಲಿಸುವುದಿಲ್ಲ ಎಂಬ ನಂಬಿಕೆ ಇದೆ. ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ನಿಷೇಧ ಮಾಡುತ್ತೇವೆಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದರಿಂದ ಅರ್ಥವಾಗುತ್ತದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಜಿಹಾದ್ ಗೆ ಬೆಂಬಲ ಕೊಡುತ್ತಾರೆ ಎನ್ನುವುದು. ಕ್ಷೇತ್ರದ ಜನತೆ ಬಿಜೆಪಿಗೆ ಮತ ಕೊಡುತ್ತಾರೆ. ತಿಲಕ, ಕೇಸರಿ ಶಾಲನ್ನು ಎಸೆಯುವ, ಮಸೀದಿಗೆ ತೆರಳಿ ಟೋಪಿ, ಹಸಿರು ಶಾಲು ಧರಿಸಿ ಇಫ್ತಿಯಾರ್ ಕೂಟ ನಡೆಸುವ ಸಿದ್ದರಾಮಯ್ಯ ಹಿಂದೂ ವಿರೋಧಿಯಲ್ಲವೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಕ್ಷೇತ್ರದಲ್ಲಿ ಗೂಂಡಾಗಿರಿ ಇತ್ತು. ಚಾಕು ಸಂಸ್ಕೃತಿ ಇತ್ತು. ಗೂಂಡಾಗಿರಿ, ಚಾಕು ಸಂಸ್ಕೃತಿ ಬೇಡ ಅಂದ್ರೆ ಬಿಜೆಪಿಗೆ ಮತ ಹಾಕಬೇಕು. ರೂಪಾಲಿ ನಾಯ್ಕರು ಹಿಂದೂ ದೇವಾಲಯಗಳ ಅಭಿವೃದ್ಧಿ ಮಾಡಿದ್ದಾರೆ ಎಂದರು.