Slide
Slide
Slide
previous arrow
next arrow

ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸೇರ್ಪಡೆಗೊಳ್ಳುತ್ತಿದ್ದೇನೆ: ವಿಶ್ವನಾಥ ನಾಯ್ಕ

300x250 AD

ಅಂಕೋಲಾ: ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲು ಮನಸ್ಸು ಬಾರದೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಅಂಕೋಲಾ ತಾಲೂಕನ್ನು ಹಿಂದೆಂದು ಕಂಡಿರದ ಅಭಿವೃದ್ಧಿ ಮಾಡಿದ ಶಾಸಕಿ ರೂಪಾಲಿ ನಾಯ್ಕರ ಅಭಿವೃದ್ಧಿಯನ್ನು ಗಮನಿಸಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಪುರಸಭೆ ಸದಸ್ಯ ವಿಶ್ವನಾಥ ನಾಯ್ಕ ಹೇಳಿದರು.

ತಾಲೂಕಿನ ಪುರಸಭೆ ವ್ಯಾಪ್ತಿಯ ಕಲಬಾಗ್ ದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಪುರಸಭೆ ಸದಸ್ಯ ಸೂರಜ್ ನಾಯ್ಕ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ನಿಷ್ಠರಿಗೆ ಸರಿಯಾದ ಸ್ಥಾನಮಾನವಿಲ್ಲ. ಭಾರತೀಯ ಜನತಾ ಪಾರ್ಟಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯರ್ತನನ್ನು ಪರಿಗಣನೆಗೆ ಒಳಪಡುತ್ತಾನೆ. ಈ ಅಂಶ ನನಗೆ ಬಿಜೆಪಿ ಪಕ್ಷದ ಕಡೆ ಸೆಳೆಯುವಂತೆ ಮಾಡಿತ್ತು ಎಂದರು.
ನ0ತರ ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎಚ್.ಗೌಡರ ಮಗ ಪ್ರಶಾಂತ್ ಗೌಡ ಮಾತನಾಡಿ ನನ್ನ ತಂದೆ ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು, ಇಲ್ಲದಂತಾಗಿದ್ದಾರೆ. ಇಂದು ನಾನು ಕಾಂಗ್ರೆಸ್ ಮನೆಯ ವಾತಾವರಣಕ್ಕೆ ಬೇಸತ್ತು ಬಿಜೆಪಿ ಕುಟುಂಬ ಸೇರಿದ್ದೇನೆ. ಇರುವ ಮನೆಯ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾನು ಸಂಘಟನಾತ್ಮಕವಾಗಿ ತೊಡಗಿಕೊಳ್ಳುತ್ತೇನೆ ಎಂದರು.

ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ, ಬಿಜೆಪಿ ಪಕ್ಷದ ತತ್ವ ಸಿದ್ದಾಂತವೇ ಹಾಗಿದೆ ಭಾರತದ ಮಣ್ಣಿನ ಋಣ ತೀರಿಸಲು ಇರುವ ಏಕಮಾತ್ರ ಪಕ್ಷ ಎಂದು ಎಲ್ಲರಲ್ಲಿ ಮನದಟ್ಟಾಗುತ್ತಿದೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಹೊರಟಿರುವ ದೇವತಾ ಮನುಷ್ಯ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ನನ್ನ ಕ್ಷೇತ್ರಕ್ಕೆ ಬರುತ್ತಿರುವುದು ನನ್ನ ಬಾಗ್ಯ ನಾವೆಲ್ಲರೂ ಸೇರಿ ಮಹಾನ್ ಪುರುಷನಿಗೆ ಭವ್ಯ ಸ್ವಾಗತವನ್ನು ನೀಡೋಣ ಎಂದರು.

300x250 AD


ಈ ಸಂದರ್ಭದಲ್ಲಿ ತಾಲೂಕಾ ಮಂಡಲಾದ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ಸಾಯಿ ಟ್ರಸ್ಟ್ ಮುಖ್ಯಸ್ಥ ಡಾ.ಕೇಣಿಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ ನಾಯ್ಕ, ಸದಸ್ಯರಾದ ತಾರಾ ನಾಯ್ಕ,ಶೀಲಾ ಶೆಟ್ಟಿ,ಹೇಮಾ ಆಗೇರ, ಓಬಿಸಿ ಮೋರ್ಚಾದ ಉಪಾಧ್ಯಕ್ಷ ಕರಣ ನಾಯ್ಕ, ಪುರಸಭೆ ಮಾಜಿ ಸದಸ್ಯರಾದ ನಾಗೇಂದ್ರ ಸಿ ನಾಯ್ಕ, ಕೃಷ್ಣಕುಮಾರ್ ಮಹಾಲೆ ಹಿಲ್ಲೂರು ಗ್ರಾಪಂ ಅಧ್ಯಕ್ಷ ಬಾಬು ಸುಂಕೇರಿ ಹಾಗೂ ಬಿಜೆಪಿ ರಾಜ್ಯ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಹೂವಾ ಖಂಡೇಕರ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುರಸಭೆ ಇನ್ನೋರ್ವ ಸದಸ್ಯೆ ಜೈರಾಭಿ ಬೆಂಗ್ರೆ, ಶಾಂತಾದುರ್ಗಾ ಗೆಳೆಯರ ಬಳಗದವರಾದ ಸೂರಜ್ ಅಣ್ವೆಕರ್ ಹಾಗೂ ಅವರ ಗೆಳೆಯರ ಬಳಗ, ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷ ವಿತ್ತೇಶ್ ನಾಯಕ ಹಾಗೂ ಸದಸ್ಯರು, ಅಲಗೇರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷರ ಮಗ ಅಜೀತ್ ನಾಯ್ಕ ಈ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾದರು.

Share This
300x250 AD
300x250 AD
300x250 AD
Back to top