ಕುಮಟಾ: ರಾಜಕೀಯದಲ್ಲಿ ಚಿಕ್ಕಪುಟ್ಟ ಮುನಿಸು ಸಹಜ. ಆದರೆ ಅದನ್ನೇ ಮುಂದುವರೆಸಿಕೊ0ಡು ಹೋಗುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಈಗ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ. ಪಕ್ಷಾಂತರ ಮಾಡಿದವರು ಎಂದಿಗೂ ಅಧಿಕಾರವಿರಲು ಸಾಧ್ಯವಿಲ್ಲ ಎಂದು ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಹೇಳಿದರು.
ಗೋಕರ್ಣದಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಈ ಕಚೇರಿ ಎಲ್ಲ ಶ್ರಮ ಜೀವಿಗಳ ಕಷ್ಟಗಳಿಗೆ ಕಿವಿಯಾಗಿ ಅಭಿವೃದ್ಧಿ ಕಾರ್ಯಗಳ ಕೇಂದ್ರವಾಗಿ ಹೆಮ್ಮರದಂತೆ ಬೆಳೆದು ಸಾವಿರಾರು ಜನರಿಗೆ ನೆರಳಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ನಿವೇದಿತ್ ಆಳ್ವಾ, ಪ್ರಮುಖರಾದ ನಾಗರಾಜ ಹಿತ್ತಲಮಕ್ಕಿ, ಹನೀಪ್ ಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.