ಯಲ್ಲಾಪುರ: ಚುನಾವಣೆಗೆ ಕೆಲವೇ ದಿನಗಳಿರುವ ಈ ಸಂದರ್ಭದಲ್ಲಿ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ಕಾರ್ಯಕರ್ತರು ಮನೆಮನೆಗೆ ಹೋಗಿ ಬಿರುಸಿನಿಂದ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.
ಕನೇನಳ್ಳಿಯಲ್ಲಿ ನಡೆದ ಮನೆಮನೆ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಎಂ.ಜಿ.ಭಟ್ಟ ಸಂಕದಗುoಡಿಯವರು ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ಸಮರ್ಪಿಸಿ, ಶಿವರಾಮ ಹೆಬ್ಬಾರ್ ಅವರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಮ್ಮಚಗಿ ಗ್ರಾ.ಪಂ.ಅಧ್ಯಕ್ಷೆ ರೂಪಾ ಪೂಜಾರಿ, ಉಪಾಧ್ಯಕ್ಷ ಶಿವರಾಯ ಪೂಜಾರಿ, ತಾ.ಪಂ. ಮಾಜಿ ಸದಸ್ಯೆ ರಾಧಾ ಹೆಗಡೆ ಗ್ರಾ.ಪಂ.ಸ್ಥಳೀಯ ಸದಸ್ಯ ಗ.ರಾ.ಭಟ್ಟ, ಪಕ್ಷದ ಕಾರ್ಯಕರ್ತರಾದ ಸುಬ್ರಾಯ ಭಾಸ್ಕರ ಹೆಗಡೆ, ಉಮ್ಮಚಗಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಪಾದ ಹೆಗಡೆ ಸಂಕದಗು0ಡಿ, ಗೋವಿಂದ ಬಸಾಪುರ ಅಲ್ಲದೆ, ಪಕ್ಷದ ವಿಶೇಷ ವೀಕ್ಷಕರಾಗಿ ಆಗಮಿಸಿದ್ದ ಸಿದ್ದಾಪುರ ತಾಲೂಕು ಮೂರೂರಿನ ಮಾಬ್ಲೇಶ್ವರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.