ಕೇರಳ, ಭಾರತದ ಅತ್ಯಂತ ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯ. ಇಲ್ಲಿನ ಲಿಂಗಾನುಪಾತ ಇತರೆಡೆಗಿಂತ ವ್ಯತಿರಿಕ್ತವಾಗಿ ಇದೆ. ಪರಿಸರಿಕವಾಗಿ ಸಮೃದ್ಧವಾದ ಈ ನಾಡು ಮಲಬಾರ್ ತೀರವನ್ನು ಹೊಂದಿ ಕಂಗೊಳಿಸುತ್ತದೆ. ನಮ್ಮ ಬೆಂಗಳೂರಿಗು ಕೇರಳಕ್ಕೂ ಹೆಚ್ಚು ದೂರವಿಲ್ಲ. ಆಗಾಗ ಪ್ರವಾಸಕ್ಕೆ ಹೋಗುವ, ಪ್ರೇಮಿಗಳು ಸ್ವರ್ಗಾನುಭವ ಪಡೆಯಲೋಸುಗ ತೆರಳುವ , ನವವಿವಹಿತರು ಹನಿಮೂನಿಗೆ ಹೋಗುವ ಜಾಗ ಕೇರಳ. ಯಾಕಂದ್ರೆ ಕೇರಳ, ಗಾಡ್ಸ್ ಓವ್ನ್ ಕಂಟ್ರಿ ( ಅರ್ಥಾತ್ ದೇವರ ನಾಡು).
ಇಂತಿಪ್ಪ ದೇವರ ನಾಡಿನ ಕಥೆ ಕ್ರೂರವಾಗಿದೆ. ಅಲ್ಲಿ ಹಸಿರೆಷ್ಟು ದಟ್ಟವಾಗಿ ಆವರಿಸಿದೆಯೋ, ಕರಾಳತೆಯ ಮತಾಂತರ ಕೂಡಾ ನಿಬಿಡವಾಗಿ ಹಾಸುಹೊಕ್ಕಾಗಿದೆ. ಕೇರಳಕ್ಕೆ ಅಂದು ವಾಸ್ಕೊಡಿಗಾಮ ಕಾಲಿಟ್ಟ ಅದು 1498ರಲ್ಲಿ ಕೇರಳದ ಕ್ಯಾಲಿಕಟ್ ಭಾರತದ ಹೆಬ್ಬಾಗಿಲಾಗಿತ್ತು. ಪರಕೀಯರ ಆಗಮನವಾಯಿತು. ಅಂತೆಯೇ ಅರಬ್ಬರು ಬರುತ್ತಿದ್ದೂ ಈ ಮಾರ್ಗವೇ ಆದ ಕಾರಣ ನಮ್ಮ ಪಶ್ಚಿಮ ಸಮುದ್ರ ಅರಬ್ಬೀ ಸಮುದ್ರ. ಸ್ಥಳೀಯರ ಜೊತೆ ಬೆರೆತು ಸೃಷ್ಟಿಯಾದ ಜನಾಂಗ ತಮ್ಮ ಮೂಲಚಾಳಿ ಬಿಡದೆ ಧರ್ಮಾಂತರ, ಮತಾಂತರಗೊಳಿಸುತ್ತ ದೇವರ ನಾಡನ್ನು ನೋಡು ನೋಡುತ್ತ ಬದಲಿಸಿಬಿಟ್ಟರು. ಅದಕ್ಕೆ ಕಾರಣ ರಾಜಕೀಯ. ಅಲ್ಲಿ ಇಂದಿಗೂ ಆಡಳಿತ ನಡೆಸುವ ಕಮ್ಯುನಿಸ್ಟ್ ಆಗಾಗ ಕೋಲಾಹಲ ಎಬ್ಬಿಸುತ್ತದೆ. ವಾಮಪಂಥೀಯ ಪಕ್ಷಗಳ ಹಾಥ್ ಕೂಡ ಸಾಥ್ ನೀಡುತ್ತದೆ. ಇದರಿಂದ ಮತಾಂತರ ತೀವ್ರವಾಗಿದೆ. ಮೊದಲೆ ತಿಳಿಸಿದಂತೆ ವಿದ್ಯಾವಂತರು ಇಲ್ಲಿ ಅಧಿಕ. ಉದ್ಯೋಗ ಅರಸಿ ತೈಲ ದೇಶದ ಕಡೆ ಹೋಗುವುದು ಸಾಮಾನ್ಯ ವಾಡಿಕೆ. ಅಲ್ಲಿಂದ ಹರಿದು ಬಂದ ಸಂಪತ್ತು ಉಪಯೋಗವಾಗುತ್ತಿರುವುದು ನಾನಾ ಕಾರಣ ಕೆಲಸಗಳಿಗೆ. ಇದು ಮತಾಂತರ ಕೀಚಕ ವೃಕ್ಷದಂತೆ ಹಬ್ಬಲು ಕಾರಣವಾಗುತ್ತದೆ.
ಇದೇ ವಿಷಯವನ್ನು ಆಧರಿಸಿ ‘ದಿ ಕೇರಳ ಸ್ಟೋರಿ’ ಎಂಬ ಚಿತ್ರದ ಟ್ರೇಲರ್ ಬಿಡುಡೆ ಆಗಿದೆ. ಮತಾಂತತರದ ಕುರಿತ ಎಳೆಗಳು ಬಿಂಬಿತವಾಗಿವೆ. ದೇಶಾದ್ಯಂತ ಸೆನ್ಸೇಶನ್ ಮೂಡಿಸಿದೆ. ದೇವರ ಮತಾಂತರವನ್ನು ಕೂಲಂಕಷವಾಗಿ ತೆರೆದಿಡುವ ಯತ್ನವಿಲ್ಲಿದೆ. ತಿಳಿವಳಿಕೆಗಾಗಿ ಅರಿವಿಗಾಗಿ ಜಾಗೃತಿಗಾಗಿ ಇದು ಈ ಸಮಯದ ತುರ್ತು.