• Slide
    Slide
    Slide
    previous arrow
    next arrow
  • ದೇಶಪಾಂಡೆ ಆಯ್ಕೆಗಾಗಿ ಧರ್ಮಾತೀತವಾಗಿ ಉಳುವಿಯಲ್ಲಿ ಪೂಜೆ

    300x250 AD

    ಯಲ್ಲಾಪುರ: ಮಾಜಿ ಸಚಿವ ಹಳಿಯಾಳದ ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಪುನರಾಯ್ಕೆ ಮಾಡುವಂತೆ ತಾಲೂಕಿನ ಕಿರವತ್ತಿ ಭಾಗದ ಧರ್ಮತೀತವಾಗಿ ಹಲವಾರು ಅಭಿಮಾನಿಗಳು ಸೋಮವಾರ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
    ದೇಶಪಾಂಡೆ ಅಭಿಮಾನಿಗಳಾದ ಯಲ್ಲಾಪುರ ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಕಳಸೂರಕರ, ಕಿರವತ್ತಿ ಹಾಗೂ ಮದನೂರು ಭಾಗದ ಕಾಂಗ್ರೆಸ್ ಮುಖಂಡ ಬಾಬು ಸಿದ್ದಿ(ಕ್ರಿ), ಕಿರವತ್ತಿ ಬೂತ್ ಕಾಂಗ್ರೆಸ್ ಅದ್ಯಕ್ಷ ಮಂಜುನಾಥ ವಾಲ್ಮಿಕಿ, ಬೊಮ್ಮಡಿಕೊಪ್ಪ ಬೂತ್ ಕಾಂಗ್ರೆಸ್ ಅಧ್ಯಕ್ಷ ದೊಂಡು ಪಟಗಾರೆ, ಕಳಸೂರು ಬೂತ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ಶಿರನಾಳಕರ, ಪ್ರಮುಖರಾದ ಮುಸ್ತಾಕ ಶೇಖ(ಮು) ಹಾಗೂ ಶೇಖರ ಗೋಸಾವಿ ಉಳುವಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
    ಆರ್ ವಿ ದೇಶಪಾಂಡೆ ಅವರು ಮತ್ತೆ ಆಯ್ಕೆಯಾಗಿ ಸರ್ಕಾರದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದರೆ ಉತ್ತರ ಕನ್ನಡ ಜಿಲ್ಲೆ ಹಾಗೂ ಹಳೆಯ ಕ್ಷೇತ್ರ ಜೊತೆಗೆ ಎಲ್ಲಾಪುರದ ಕಿರವತ್ತಿ ಭಾಗಗಳು ಬಹಳಷ್ಟು ಅಭಿವೃದ್ಧಿ ಕಾಣಲಿವೆ. ಅವರಿಂದ ಜಿಲ್ಲೆಗೆ ಹಾಗೂ ಹಳಿಯಾಳ ಜನತೆಯ ಸೇವೆ ಮಾಡುವ ಅವಕಾಶ ಉಳವಿ ಚನ್ನಬಸವೇಶ್ವರ ಮಾಡಿಕೊಡಲಿ ಎಂದು ಪೂಜೆ ಸಲ್ಲಿಸಿದ್ದು, ಆರ್ ವಿ ದೇಶಪಾಂಡೆಯವರು ಚುನಾವಣೆಯಲ್ಲಿ ವಿಜಯಿಯಾದ ಕೆಲವೇ ದಿನಗಳಲ್ಲಿ ಕಿರವತ್ತಿಯಿಂದ ಉಳುವಿಯವರೆಗೆ ಹಲವಾರು ಅಭಿಮಾನಿಗಳೊಂದಿಗೆ ಪಾದಯಾತ್ರೆ ದೇವಸ್ಥಾನಕ್ಕೆ ತೆರಳಿ ಮತ್ತೊಮ್ಮೆ ಸೇವೆ ಸಲ್ಲಿಸುತ್ತೇವೆ ಎಂದು ಹರಕೆ ಹೊತ್ತಿರುವುದಾಗಿ ಬಸವರಾಜ ಕಳಸೂರಕರ ಹಾಗೂ ಬಾಬು ಸಿದ್ದಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top