ಶಿರಸಿ: ಸಿಂಗರ್ ಇಂಡಿಯಾ, ರೋಟರಿ ಇನ್ನರ್ ವೀಲ್ ಕ್ಲಬ್, ಶಿರಸಿ ಹಾಗೂ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಕೌಶಲ್ಯ ಅಭಿವದ್ಧಿ ಯೋಜನೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಕಾಲೇಜು ವಿದ್ಯಾರ್ಥಿನಿಯರಿಗೆ ಟೇಲರಿಂಗ್ ಮತ್ತು ಎಂಬ್ರಾಯ್ಡರಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುತ್ತಿದೆ. ಇದರ ಉದ್ಘಾಟನಾ ಕಾರ್ಯಕ್ರಮವನ್ನು ಮೇ.6, ಶನಿವಾರ ಮುಂಜಾನೆ 10 ಗಂಟೆಗೆ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಇನ್ನರ್ ವೀಲ್ ವಿಜಯಪುರದ ಜಿಲ್ಲಾಧ್ಯಕ್ಷರಾದ ಮಹಾನಂದ ಚಂದರಗಿ ಆಗಮಿಸಲಿದ್ದಾರೆ . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಇಎಸ್ ಅಧ್ಯಕ್ಷರಾದ ಜಿ.ಎಂ. ಹೆಗಡೆ ಮುಳಖಂಡ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಿಎಸ್ಆರ್ ಸಿಂಗರ್ ಇಂಡಿಯಾದ ಮುಖ್ಯಸ್ಥೆ ಅಲ್ಪನಾ ಸರ್ನಾ, ಸಿಎಸ್ಆರ್ ನ ವ್ಯವಸ್ಥಾಪಕ ನಿರ್ದೇಶಕರಾದ ಶೇಕ್ ಇಮ್ರಾನ್, ಹಾಗೂ ಕಾಲೇಜಿನ ಉಪಸಮಿತಿ ಅಧ್ಯಕ್ಷರಾದ ಎಸ್.ಕೆ. ಭಾಗ್ವತ್, ಖ್ಯಾತ ನೇತ್ರ ತಜ್ಞ ಡಾ.ಕೆ.ವಿ. ಶಿವರಾಮ್, ಶಿರಸಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗದ ಶ್ರೀಮತಿ ಮಾಧುರಿ ಶಿವರಾಮ್ ಆಗಮಿಸಲಿದ್ದಾರೆ.
ಆರಂಭಿಕವಾಗಿ ಒಂದು ತಿಂಗಳಿಗೆ 100 ರೂ ಶುಲ್ಕ ಮಾತ್ರ ಆಕರಿಸಲಾಗುತ್ತಿದೆ. ವಿಧವೆಯರಿಗೆ, ಬಡ ಹೆಣ್ಣು ಮಕ್ಕಳು ಹಾಗೂ ಅನಾಥರಿಗೂ ಈ ಯೋಜನೆ ಅಡಿಯಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮೊದಲ ಬ್ಯಾಚ್ ನಲ್ಲಿ ಇಪ್ಪತ್ತೈದು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಾಗಿದ್ದು, ಪ್ರತಿದಿನ ಮಧ್ಯಾಹ್ನ ನಾಲ್ಕು ಗಂಟೆಯಿಂದ ಯಿಂದ ತರಗತಿಗಳು ಆರಂಭವಾಗುತ್ತದೆ. ಎಂಇಎಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮೊದಲ ಪ್ರಾಶಸ್ತ್ಯ ವನ್ನು ಕಲ್ಪಿಸಲಾಗಿದ್ದು, ಕಲಿಕೆಯ ದೃಷ್ಟಿಯಿಂದ ನಿರ್ದಿಷ್ಟ ಪಠ್ಯಕ್ರಮವನ್ನು ರೂಪಿಸಲಾಗಿದೆ. ಈ ಕೋರ್ಸ್ ನಿರಂತರವಾಗಿ ನಡೆಯುತ್ತಲಿರುತ್ತದೆ. ಒಂದು ವರ್ಷಕ್ಕೆ 150 ಕ್ಕೂ ಅಧಿಕ ಅಭ್ಯರ್ಥಿಗಳು ಓದುವ ಅವಕಾಶವನ್ನು ಇದು ಹೊಂದಿದೆ. ಅಭ್ಯರ್ಥಿಗಳು ಬಯಸಿದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಉದ್ಯೋಗವನ್ನು ಒದಗಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಸ್ತ್ರೀ ಸಬಲೀಕರಣ ಹಾಗೂ ಸ್ವಉದ್ಯೋಗ ಕೌಶಲ್ಯವನ್ನು ರೂಪಿಸುವುದು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ