ಹೊನ್ನಾವರ: ಜಿಪಂ ಮಾಜಿ ಸದಸ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಕರ್ಕಿಯಲ್ಲಿ ನಡೆದ ಬಿಜೆಪಿ ಪಕ್ಷ ಸೆರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಂಡರು.
ನoತರ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರಲು ಪಕ್ಷದ ಹಿರಿಯ, ಕಿರಿಯ ಎಲ್ಲ ಮುಖಂಡರು ಆಮಂತ್ರಣ ಮಾಡಿದ್ದರು. ಅದಕ್ಕಾಗಿ ನಾನು ಅವರೆಲ್ಲರಿಗೂ ಋಣಿಯಾಗಿದ್ದೇನೆ ಎಂದರು.ಕಾ0ಗ್ರೆಸ್ ಪಕ್ಷದಲ್ಲಿದ್ದಾಗ ಸಂಘರ್ಷದಲ್ಲಿದ್ದೆ. ಕಾಂಗ್ರೆಸ್ ನಂತಹ ದ್ರೋಹ ಮಾಡುವಂತಹ,ಕಾರ್ಯಕರ್ತರಿಗೆ ಗೌರವ ಕೊಡದಂತಹ ಪಕ್ಷದಿಂದ ಹೊರಬಂದಿದಕ್ಕೆ ಇವತ್ತು ನಿರಾಳನಾಗಿದ್ದೇನೆ. ಬಿಜೆಪಿಯಂತಹ ಬಹುದೊಡ್ಡ ರಾಜಕೀಯ ಪಕ್ಷದ ಸದಸ್ಯನಾಗಲಿಕ್ಕೆ ಇವತ್ತು ಬಹಳ ಸಂತೋಷ ಆಗುತ್ತದೆ ಎಂದರು.
ಕಾ0ಗ್ರೆಸ್ಸಿಗೆ ನೈತಿಕತೆ ಇಲ್ಲ, ಕಾಂಗ್ರೆಸ್ ಅಂದರೆ ನಮಗೆ ಮೋಸ, ದ್ರೋಹ, ಅಪನಂಬಿಕೆ ಅನಿಸುತ್ತದೆ. ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಿಂದ ನಿರ್ನಾಮ ಆಗಬೇಕು. ಎಲ್ಲರು ಕೂಡ ಬಹಿಷ್ಕರಿಸಬೇಕು. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಪಣ ತೊಡಬೇಕು ಎಂದರು.
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಾತನಾಡಿ, ಇಂದು ಬಿಜೆಪಿಗೆ ಅದೃಷ್ಟದ ದಿನ. ಶಿವಾನಂದ ಹೆಗಡೆ ಕಡತೋಕಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ನಮಗೆ ಇನ್ನಷ್ಟು ಶಕ್ತಿ ಬಂದ0ತಾಗಿದೆ. ಅವರು ಪಕ್ಷ ಸೇರ್ಪಡೆಯಿಂದ ನಾನು ಅದೃಷ್ಟವಂತನಾಗಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಧೈರ್ಯವಾಗಿ ಹೇಳುತ್ತೇನೆ. ಶಿವಾನಂದ ಹೆಗಡೆ ಸೇರ್ಪಡೆಯಿಂದ 30 ಸಾವಿರಕ್ಕೂ ಹೆಚ್ಚಿನ ಮತ ಗಳಿಸುವುದು ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಗೋವಾ ಶಾಸಕ ಕೃಷ್ಣ ಜಿ.ಸಾಲ್ಕರ್ ಮಾತನಾಡಿ, ಶಿವಾನಂದ ಹೆಗಡೆ ಅಂತವರು ನಮ್ಮ ಪಕ್ಷಕ್ಕೆ ಅತ್ಯಗತ್ಯವಾಗಿದೆ. ದೇಶದಲ್ಲಿ ಕರೋನಾ ದೂರವಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವೇ ಕಾರಣವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ಶಿವಾನಂದ ಹೆಗಡೆ ಕಡತೋಕಾ ಅವರ ಸೇರ್ಪಡೆ ಬಿಜೆಪಿ ಪಕ್ಷಕ್ಕೆ ಆನೆಬಲ ಬಂದ0ತಾಗಿದೆ. ಅವರ ರಾಜಕೀಯ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾ ಚುನಾವಣಾ ಸಂಚಾಲಕ ಕೆ.ಜಿ.ನಾಯ್ಕ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತವನ್ನು ನೋಡಿ ಅನೇಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಶಿವಾನಂದ ಹೆಗಡೆ ಕಡತೋಕಾ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಸ್ಥಾನ ಮಾನ ನೀಡುವ ಮೂಲಕ ಅವರ ರಾಜಕೀಯ ರಥವನ್ನು ನಾವು ಎಳೆಯಲಿದ್ದೇವೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಎಂ.ಜಿ.ಭಟ್, ಉಮೇಶ ನಾಯ್ಕ, ನಾಗರಾಜ್ ನಾಯ್ಕ ತೊರ್ಕೆ, ವೆಂಕಟ್ರಮಣ ಹೆಗಡೆ, ಸುಬ್ರಾಯ ವಾಳ್ಕೆ, ದೀಪಕ್ ನಾಯ್ಕ ಮಂಕಿ ಮತ್ತಿತರಿದ್ದರು. ಮಂಡಲಾಧ್ಯಕ್ಷ ರಾಜು ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.