Slide
Slide
Slide
previous arrow
next arrow

ಸುಡಾನ್’ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿಳಿದ ದಾಂಡೇಲಿ ಯುವಕರು

300x250 AD

ದಾಂಡೇಲಿ: ಇಬ್ಬರು ಜನರಲ್‌ಗಳ ನಡುವಿನ ಯುದ್ಧದಲ್ಲಿ ಹೊತ್ತಿ ಉರಿಯುತ್ತಿರುವ ಸುಡಾನ್ ದೇಶದಲ್ಲಿ ಆತಂಕದಿಂದ 15 ದಿನಗಳನ್ನು ಕಳೆದಿದ್ದ ದಾಂಡೇಲಿ ನಗರದ ಬಾಂಬೆಚಾಳದ ಒಂದೇ ಕುಟುಂಬದ ಇಬ್ಬರು ಆಪರೇಷನ್ ಕಾವೇರಿಯ ಮೂಲಕ ಯಶಸ್ವಿಯಾಗಿ ತಾಯ್ನಾಡಿಗೆ ಬಂದಿದ್ದಾರೆ.

ನಗರದ ಬಾಂಬೆಚಾಳದ ಒಂದೇ ಕುಟುಂಬದ ಉದಯಕುಮಾರ್ ಸಿದ್ದಪ್ಪ ಮಾದ‌ ಮತ್ತು ಅವರ ಅಣ್ಣನ ಮಗ ಚೇತನ್ ರಮೇಶ್ ಮಾದರ ಎಂಬಿಬ್ಬರು ಜೀವಭಯದಿಂದ ಮುಕ್ತರಾಗಿ ದಾಂಡೇಲಿಗೆ ಬಂದು ತಲುಪಿದ್ದಾರೆ.

ಉದಯಕುಮಾರ್ ಕಳೆದ 12 ವರ್ಷಗಳಿಂದ ಸುಡಾನ್ ದೇಶದ ಒಂದು ಕಾರ್ಖಾನೆಯಲ್ಲಿ ಬಾಯ್‌‌ ಮೆಕಾನಿಕ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಕಳೆದ ಒಂದು ವರ್ಷದಿಂದ ಅದೇ ಕಾರ್ಖಾನೆಯಲ್ಲಿ ಅವರ ಅಣ್ಣನ ಮಗನಾದ ಚೇತನ್ ರಮೇಶ್ ಮಾದರ ಎಂಬಾತನೂ ಕೆಲಸ ನಿರ್ವಹಿಸುತ್ತಿದ್ದನು.

300x250 AD

ಸುಡಾನ್‌ನಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆಯೇ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೂ ಅಲ್ಲಿಯ ಕಾರ್ಖಾನೆಯವರು ಬಹಳ ಮುತುವರ್ಜಿ ವಹಿಸಿ ನೋಡಿಕೊಂಡಿದ್ದರು. ಕದನ ವಿರಾಮದ ಸಂದರ್ಭದಲ್ಲಿ ಅವರನ್ನು ಕರೆದೊಯ್ಯಲು ಬಂದಿದ್ದ ಹಡಗಿದ್ದ ಸ್ಥಳಕ್ಕೆ 800 ಕಿಮೀ ದೂರದವರೆಗೆ ಕಾರ್ಖಾನೆಯವರೇ ಬಸ್ ಮೂಲಕ ಇವರನ್ನು ಕಳುಹಿಸಿಕೊಟ್ಟಿದ್ದರು. ಆನಂತರ ಅಲ್ಲಿಂದ ದೇಶದ ಆಪರೇಷನ್‌ ಕಾವೇರಿಯ ಮೂಲಕ ದೆಹಲಿಗೆ ಬಂದು, ದೆಹಲಿಯಿಂದ ಹುಬ್ಬಳ್ಳಿಗೆ ತಲುಪಿ ದಾಂಡೇಲಿಗೆ ಬಂದು ತಲುಪಿದ್ದಾರೆ.

“ನಾವು ಮರಳಿ ನಮ್ಮೂರಿಗೆ ಹೋಗುತ್ತೇವೆ ಎಂಬುವುದನ್ನು ಮರೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಭಾರತ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ, ನೆರವಿಗೆ ಬಂದಿದೆ’ ಎಂದು ಉದಯಕುಮಾರ್ ಸಿದ್ದಪ್ಪ ಮಾದ‌ ಮತ್ತು ಅವರ ಅಣ್ಣನ ಮಗ ಚೇತನ್ ರಮೇಶ್ ಮಾದರ ಮಾಧ್ಯಮಕ್ಕೆ ವಿವರಿಸಿದ್ದಾರೆ. ಇವರಿಬ್ಬರ ಆಗಮನದಿಂದ ಮನೆ ಮಂದಿಯ ಆತಂಕ ದೂರವಾಗಿದ್ದು, ಮನೆಯಲ್ಲಿ ನೆಮ್ಮದಿ ಕಾಣುವಂತಾಗಿದೆ.

Share This
300x250 AD
300x250 AD
300x250 AD
Back to top