ದಾಂಡೇಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಭರವಸೆ ನೀಡಿ, ವರ್ಷಕ್ಕೆ ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗದೇ ನಿರುದ್ಯೋಗಿ ಯುವ ಜನತೆಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಉದ್ಯೋಗ ಸೃಷ್ಟಿ ಮಾಡುವುದಕ್ಕಿಂತ, ಬಂಡವಾಳ ಶಾಹಿ ಧೋರಣೆಯಿಂದ ಇದ್ದ ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡಿದ್ದೆ ಬಿಜೆಪಿಯ ಸಾಧನೆ. ನರೇಂದ್ರ ಮೋಧಿಯವರ ನೇತೃತ್ವದ ಕೇಂದ್ರದ ನೀಡಿದ ಭರವಸೆಯಂತೆ ಕಳೆದ 9 ವರ್ಷಗಳಲ್ಲಿ ವರ್ಷಕ್ಕೆ 2 ಕೋಟಿಯಂತೆ 18 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಉದ್ಯೋಗ ಸೃಷ್ಟಿಯ ಮಾತು ಕೇವಲ ಭರವಸೆಯಾಗಿಯೆ ಉಳಿದಿದೆ. ಇದರೆ ನಡುವೆ ದೈನಂದಿನ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ರಾಷ್ಟçದ ಬಡಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.