• Slide
  Slide
  Slide
  previous arrow
  next arrow
 • ಮಾನವೀಯತೆ ಮೆರೆದ ಇಂಟರಾಕ್ಟ್ ಕ್ಲಬ್, ಶಾರದಾ ವಿದ್ಯಾನಿಕೇತನ ಕಾಲೇಜು

  300x250 AD

  ಹೊನ್ನಾವರ: ಪಾರ್ಶ್ವವಾಯು ಪೀಡಿತರಾಗಿ ಕಳೆದ ಆರು ತಿಂಗಳಿನಿAದ ಹಾಸಿಗೆ ಹಿಡಿದಿರುವ ಮನೆಗೆ ಆರ್ಥಿಕ ಆಧಾರವಿಲ್ಲದೆ ಕಂಗಾಲಾಗಿರುವ, ಕಳೆದ 25 ವರ್ಷಗಳಿಂದ ಸ್ವಂತ ಶೌಚಾಲಯ, ಸ್ನಾನಗೃಹವಿಲ್ಲದೆ ಬಯಲು ಶೌಚಕ್ಕೆ ಅವಲಂಬಿತವಾಗಿರುವ ಹೊನ್ನಾವರದ ಅಶೋಕ್ ವೆಂಕಟೇಶ್ ಬೋಂಮಕರ್ ಕುಟುಂಬವು ಪತ್ರದ ಮುಖೆನ ಸಹಾಯಕ್ಕಾಗಿ ಯಾಚಿಸಿದ್ದನ್ನು ಮನಗಂಡು ಮಂಗಳೂರಿನ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಇಂಟರಾಕ್ಟ್ ಕ್ಲಬ್‌ನ ವಿದ್ಯಾರ್ಥಿನಿಯರು ಮತ್ತು ಶಿಕ್ಷಕ ವೃಂದದವರು ಕಾಲೇಜಿನ ಪ್ರಾಂಶುಪಾಲರಾದ ವಿನಾಯಕ್ ಬಿಜಿ, ಸುರೇಂದ್ರ ಖಾಮಕರ್ ಮತ್ತು ಇತರ ಸಿಬ್ಬಂದಿಯೊಂದಿಗೆ ಹೊನ್ನಾವರಕ್ಕೆ ಬಂದು ರೂಪಾಯಿ 50,000ಗಳನ್ನು ಶೌಚಾಲಯ ಮತ್ತು ಸ್ನಾನ ಗೃಹವನ್ನು ನಿರ್ಮಾಣ ಮಾಡುವುದಕ್ಕಾಗಿ ಅಶೋಕ್ ಬೋಮಕರ್ ಇವರಿಗೆ ನೀಡಿ ಉದಾರತೆಯನ್ನು ಮೆರೆದಿದ್ದಾರೆ.

  ಇವರ ಇಂತಹ ಸಮಾಜಮುಖಿ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್, ನಿರ್ದೇಶಕರಾದ ಸಮೀರ್ ಪುರಾಣಿಕ್ ಹಾಗೂ ಮಂಗಳೂರು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಆರ್. ಕೆ. ಭಟ್ ಇವರು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ. ಕೇಂದ್ರ ಸರ್ಕಾರದ ಬಯಲು ಶೌಚಾಲಯ ಮುಕ್ತ ಯೋಜನೆ ಇದ್ದರೂ ಕೂಡ ಕೇವಲ ತಾಂತ್ರಿಕ ಕಾರಣಗಳಿಂದ ಸ್ವಂತ ಶೌಚಾಲಯವಿಲ್ಲದೆ 25 ವರ್ಷ ಕಳೆದ ಈ ಬಡ ಕುಟುಂಬಕ್ಕೆ ವಿದ್ಯಾರ್ಥಿಗಳು ಆಶಾಕಿರಣವಾಗಿ ಬಂದಿದ್ದಾರೆ. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಬರುವ ರಾಜಕಾರಣಿಗಳು ಇನ್ನಾದರೂ ಇಂತಹ ಕುಟುಂಬಗಳಿಗೆ ಸಹಾಯ ಮಾಡಲಿ, ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಮಾಡಬೇಕು ಎನ್ನುವುದು ಇಂಟರೆಕ್ಟ್ ಕ್ಲಬ್, ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಆಶಯವಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top