Slide
Slide
Slide
previous arrow
next arrow

ಪ್ರಶಾಂತ ದೇಶಪಾಂಡೆಯಿಂದ ಮತ ಯಾಚನೆ

300x250 AD

ಜೊಯಿಡಾ: ತಾಲೂಕಿನ ಹುಡಸಾ, ಅವರ್ಲಿ, ನಂದಿಗದ್ದೆ, ಉಳವಿ, ಶಿವಪುರ ಭಾಗದಲ್ಲಿ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಬಿರುಸಿನ ಪ್ರಚಾರ ಕೈಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್. ವಿ. ದೇಶಪಾಂಡೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಮಂತ್ರಿಯಾಗಿ, ಶಾಸಕರಾಗಿ ಕಾರ್ಯ ನಿರ್ವಹಿಸಿದವರು. ಜೊಯಿಡಾ ತಾಲೂಕಿನ ಚಿತ್ರಣ ಅವರಿಗೆ ತಿಳಿದಿದೆ. ಹಿಂದೆ ದಟ್ಟ ಕಾಡಿನ ಪ್ರದೇಶವಾಗಿದ್ದ ಜೊಯಿಡಾ ತಾಲೂಕಿನಲ್ಲಿ ಯಾವ ಮೂಲ ಸೌಕರ್ಯಗಳು ಇರಲಿಲ್ಲ. ಆದರೆ ಈಗ ಹಾಗಲ್ಲ ದೇಶಪಾಂಡೆ ಅವರಿಂದ ತಾಲೂಕಿನಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಆಗಿವೆ. ಅಲ್ಲದೇ ಜನರು ಯಾರು ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಮಾಡಬಹುದು ಎಂಬುದನ್ನು ಅರಿತು ನಿಮ್ಮ ಮತವನ್ನು ನೀಡಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಗಲಿದೆ ಹೀಗಾಗಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.

300x250 AD

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಸದಾನಂದ ದಬ್ಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ರಾಜ್ಯ ಕಿಸಾನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್, ಕಾಂಗ್ರೆಸ್ ಪಕ್ಷದ ಸದನಂದ ಉಪಾಧ್ಯ, ಅಮರ ಭಾಗ್ವತ್ ಇತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top