• Slide
    Slide
    Slide
    previous arrow
    next arrow
  • ಭೂದೇವಿಯ ಬಂಡಿಹಬ್ಬಕ್ಕೆ ಹೊನ್ನಿನ ಕಳಸದ ಮೆರುಗು

    300x250 AD

    ಅಂಕೋಲಾ: ತಾಲೂಕಿನ ಐತಿಹಾಸಿಕ ಸ್ಥಳ ಅವರ್ಸಾದ ಪಂಚ ಗ್ರಾಮದ ಶಕ್ತಿದೇವಿ ಶ್ರೀ ಭೂದೇವಿಯ ಬಂಡಿಹಬ್ಬಕ್ಕೆ ನವ ಹೊನ್ನಿನ ಕಳಸದ ಮೆರುಗನ್ನು ತಂದಿದೆ.

    ಸುಮಾರು 1ಕೆಜಿ 300 ಗ್ರಾಂನ ತೂಕದಲ್ಲಿ ವೈವಿಧ್ಯಮಯ ಅಲಂಕಾರದೊಂದಿಗೆ ಚಿನ್ನದ ಕಳಸವನ್ನು ಭಕ್ತಾಧಿಯೊಬ್ಬರು ಶ್ರೀ ದೇವಿಗೆ ಸಮರ್ಪಿಸಿದ್ದು,ಬಂಡಿ ಹಬ್ಬಕ್ಕೆ ಹೊಸ ವಿಶೇಷವಾಗಿ ಗೋಚರಿಸುವಂತಾಗಿದೆ. ಸುಮಾರು 2 ಶತಮಾನಕ್ಕೂ ಹೆಚ್ಚಿನ ಭವ್ಯ ಇತಿಹಾಸವಿರುವ ಈ ಬಂಡಿಹಬ್ಬವನ್ನು 4 ಕೆಜಿ ತೂಕದಲ್ಲಿರುವ ಬೆಳ್ಳಿಯ ಕಳಸದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸಲಾಗುತಿತ್ತು. ಆದರೆ ಈ ವರ್ಷ ಭಕ್ತರೊಬ್ಬರ ಸಂಕಲ್ಪದ ಹರಕೆಯಂತೆ ಚಿನ್ನದ ಕಳಸವನ್ನು ಶ್ರೀ ದೇವರಿಗೆ ನೀಡಿ ಧನ್ಯತೆ ಮೆರೆದಿದ್ದಾರೆ.

    300x250 AD

    ನೂತನ ಅಲಂಕಾರ ಭೂಷಿತ, ಆಕರ್ಷಣೀಯ ವಿನ್ಯಾಸದ ಕಳಸವು ಬಂಡಿ ಹಬ್ಬದ ಸೊಬಗನ್ನು ಹೆಚ್ಚಿಸಲಿದ್ದು,ಜನರಲ್ಲಿ ಭಕ್ತಿ ಭಾವ ಇಮ್ಮಡಿಗೊಳಿಸಲಿದೆ. ಮೇ 18ರಂದು ದೇವರನ್ನು ಕರೆಯುವದು, ಮೇ 23ರಂದು ಬಂಡಿಹಬ್ಬ ಹಾಗೂ ಮೇ 24 ರಂದು ಸಾಂಪ್ರದಾಯಿಕ ಹರಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನ ಟ್ರಸ್ಟಿಗಳಾದ ನಾರಾಯಣ ರಘುರಾಯ ಪೈ, ಉಮೇಶ ವೆಂಕಟೇಶ ಭಟ್, ಸಹಾಯಕ ಟ್ರಸ್ಟಿಗಳಾದ ಅನಂತ ಭಟ್, ರಘುರಾಯ ನಾರಾಯಣ ಪೈ ಸೇರಿದಂತೆ ದೇವಸ್ಥಾನದ ಹಕ್ಕುದಾರರು, ಗುನಗರು, ಕಟಗಿದಾರರು ಪುರೋಹಿತರು ಸೇರಿದಂತೆ ಮೊದಲಾದವರ ಸಮ್ಮುಖದಲ್ಲಿ ನೂತನ ಚಿನ್ನದ ಕಳಸವನ್ನು ಹಸ್ತಾಂತರಿಸಿಕೊಳ್ಳಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top