• Slide
  Slide
  Slide
  previous arrow
  next arrow
 • ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ: ವಿಶ್ವಜೀತ್ ರಾಣೆ

  300x250 AD

  ಹಳಿಯಾಳ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಮತದಾರರಿಗೂ ಪರಿಣಾಮಕಾರಿಯಾಗಿ ಮನನ ಮಾಡಿಸಿದ್ದೇ ಆದರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲುವು ಶತಸಿದ್ದ ಎಂದು ಗೋವಾ ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ವಿಶ್ವಜೀತ್ ರಾಣೆ ಅಭಿಪ್ರಾಯಪಟ್ಟರು.

  ಅವರು ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿಯ ಪೇಜ್ ಪ್ರಮುಖರ ಹಾಗೂ ಬೂತ್ ಕಮೀಟಿಗಳ ಅಧ್ಯಕ್ಷರ, ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ, ಸರ್ವ ಸಮುದಾಯಗಳಿಗೂ ಯಾವುದೇ ರೀತಿಯ ಜಾತಿ, ಧರ್ಮ ಭೇದ ಮಾಡದೆ ಸಮಾನವಾದ ಆಡಳಿತ ಹಾಗೂ ನೂರಾರು ಯೋಜನೆಗಳನ್ನು ನೀಡುವ ಮೂಲಕ ಪ್ರತಿಯೊಂದು ಯೋಜನೆ ನೇರವಾಗಿ ಫಲಾನುಭವಿಗೆ ತಲುಪುವಂತೆ ಉತ್ತಮ ವ್ಯವಸ್ಥೆ ಜಾರಿಗೆ ತಂದಿರುವ ನೆಚ್ಚಿನ ಪ್ರಭಾವಶಾಲಿ ಪ್ರಧಾನಿ ನರೇಂದ್ರ ಮೋದಿಯವರ ಜನರಿಗೆ ತಲುಪಿರುವ ಕಾರ್ಯಕ್ರಮಗಳನ್ನೇ ಆಯಾ ಫಲಾನುಭವಿಗಳ ಕುಟುಂಬಗಳಿಗೆ ತೆರಳಿ ಮನದಟ್ಟು ಮಾಡುವ ಮೂಲಕ ಮತ್ತೇ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುವಂತೆ ಪಕ್ಷದ ಕಾರ್ಯಕರ್ತರಲ್ಲಿ ಕರೆ ನೀಡಿದರು.

  ಮೋದಿಯವರು ಕರೆ ನೀಡಿರುವಂತೆ ಪ್ರತಿಯೊಬ್ಬ ಬೂತ ಮಟ್ಟದ ಕಾರ್ಯಕರ್ತ ಸರ್ಕಾರದ ಯೋಜನೆಯ ಫಲಾನುಭವಿಗಳ ಮನೆಗೆ ಮತ್ತು ಇತರರ ಮನೆಗೂ ಸಹಿತ ಭೇಟಿ ನೀಡಿ ಒಂದು ಗಂಟೆಯಾದರೂ ಅವರೊಂದಿಗೆ ಕಳೆದು ಕೇಂದ್ರದ ಸಾಧನೆಗಳನ್ನು ಮನನ ಮಾಡಿಸಿದರೇ ಬಿಜೆಪಿ ಪ್ರಚಂಡ ಬಹುಮತದಿಂದ ವಿಜಯಭೇರಿ ಆಗಲಿದ್ದು ಇಲ್ಲಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.

  ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ ಮಾತನಾಡಿ, ಬಿಜೆಪಿ ಪಕ್ಷ ಸಾಮಾನ್ಯ ಕಾರ‍್ಯಕರ್ತರಿಗೂ ಉನ್ನತ ಹುದ್ದೆಗಳನ್ನು ನೀಡಿ ಗೌರವ ನೀಡುತ್ತದೆ. ಇಲ್ಲಿ ಮಾಡುವ ಶ್ರಮಕ್ಕೆ, ಸಮಾಜಮುಖಿ ಕೆಲಸ ಕಾರ್ಯಗಳಿಗೆ ಸಾಕಷ್ಟು ಪ್ರೋತ್ಸಾಹ ಇದೆ. ಕಾರಣ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಶತಾಯಗತಾಯ ಬಿಜೆಪಿ ಗೆಲ್ಲಿಸುವಲ್ಲಿ ಕಾರ್ಯಕರ್ತರು ಶಕ್ತಿಮಿರಿ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ವಿಶಿಷ್ಟ ಸಮುದಾಯವಾಗಿರುವ ಹಿಂದುಳಿದಿರುವ ಕುಣಬಿ ಮತ್ತು ಗೌಳಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದರೇ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.

  300x250 AD

  ಈ ಸಂದರ್ಭದಲ್ಲಿ ಶಾಂತಾರಾಮ ಅವರು ಪಕ್ಷದ ಪೇಜ್ ಪ್ರಮುಖರು, ಬೂತ್ ಕಮಿಟಿಗಳ ಅಧ್ಯಕ್ಷರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಬಿಜೆಪಿ ಜಿಲ್ಲಾ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ, ಕಳೆದ 4 ದಶಕಗಳ ಅವಧಿಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಅಭಿವೃದ್ಧಿ ಮಾಡಿದ್ದು ಏನು ಇಲ್ಲಾ ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಯುವ ನಾಯಕ ಸುನೀಲ್ ಹೆಗಡೆ ಅವರ ಅವಶ್ಯಕತೆ ಇರುವುದನ್ನು ಜನರಿಗೆ ಮನದಟ್ಟು ಮಾಡಿಸಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

  ವೇದಿಕೆಯಲ್ಲಿ ಪಕ್ಷದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಮುತ್ನಾಳೆ, ವಿ.ಎಂ.ಪಾಟೀಲ್, ಪ್ರಮುಖರಾದ ಶಿವಾಜಿ ನರಸಾನಿ, ಯಲ್ಲಪ್ಪಾ ಹೊನ್ನೋಜಿ ಇದ್ದರು

  Share This
  300x250 AD
  300x250 AD
  300x250 AD
  Leaderboard Ad
  Back to top