• Slide
    Slide
    Slide
    previous arrow
    next arrow
  • ಗೋವಾ ಸಚಿವರು, ಶಾಸಕರಿಂದ ಬನವಾಸಿ ಮಧುಕೇಶ್ವರ ದೇವಾಲಯಕ್ಕೆ ಭೇಟಿ

    300x250 AD

    ಶಿರಸಿ: ಗೋವಾ ರಾಜ್ಯದ ಸಮಾಜ ಕಲ್ಯಾಣ, ಪುರಾತತ್ವ ಇಲಾಖೆಯ ಸಚಿವ ಸುಭಾಷ್ ಫಲ್ ದೇಸಾಯಿ ಹಾಗೂ ಗೋವಾದ ನಾವೇಲಿ ಕ್ಷೇತ್ರದ ಶಾಸಕ ಉಲ್ಲಾಸ ತುವೇಕರ ಅವರು ಕದಂಬರ ರಾಜಧಾನಿ, ಬನವಾಸಿಯ ಆರಾಧ್ಯ ದೇವ ಮಧುಕೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
    ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರವಾಸದಲ್ಲಿದ್ದಾಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಸುಭಾಷ್ ದೇಸಾಯಿ ಮತ್ತು ಶಾಸಕ ಉಲ್ಲಾಸ ತುವೇಕರ ಪೂರ್ಣ ದೇವಸ್ಥಾನ ವೀಕ್ಷಣೆ ಮಾಡಿ, ಐತಿಹಾಸಿಕ ಮಾಹಿತಿ ಪಡೆದರು. ನಂತರ ಮಧುಕೇಶ್ವರ ದೇವರ ನೂತನ ರಥದ ವೀಕ್ಷಣೆ ಮಾಡಿದರು.
    ಬಿಜೆಪಿಯ ಸರ್ಕಾರವು ಧಾರ್ಮಿಕ- ಪೌರಾಣಿಕ- ಐತಿಹಾಸಿಕ ಕ್ಷೇತ್ರಗಳ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಹೊಂದಿರುವ ಕಳಕಳಿಯ ಅಭಿವ್ಯಕ್ತಿಯಾಗಿ ಬನವಾಸಿಯ ಮಧುಕೇಶ್ವರ ದೇವರ ನೂತನ ರಥವು ನಿರ್ಮಾಣವಾಗಿದೆ. ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ ಅವರ ಛಲ ಮತ್ತು ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಸಚಿವ ಸುಭಾಷ್ ದೇಸಾಯಿ ಹೇಳಿದರು.
    ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಬಿಜೆಪಿಯ ಪ್ರಮುಖರಾದ ರವಿ ಹೆಗಡೆ, ರಮೇಶ ನಾಯ್ಕ, ಮಂಜುನಾಥ ನಾಯ್ಕ, ಗಣೇಶ ಸಣ್ಣಲಿಂಗಣ್ಣವರ, ಅರವಿಂದ ಮತ್ತಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top