Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯದಲ್ಲಿ ರೋ.ಎಸ್.ಎಸ್.ಭಟ್ ದತ್ತಿನಿಧಿ ಸ್ಥಾಪನೆ

300x250 AD

ಶಿರಸಿ; ವೃತ್ತಿಯಲ್ಲಿ ರಾಜ್ಯ ಪ್ರಶಸ್ತಿ ಜೊತೆಗೆ ನಿವೃತ್ತಿಯ ನಂತರ ನಾಲ್ಕು ರಾಜ್ಯ ಪ್ರಶಸ್ತಿ ಗಳಿಸಿರುವ ರೊಟೇರಿಯನ್ ಎಸ್.ಎಸ್.ಭಟ್ ಲೋಕೇಶ್ವರ ಇವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎರಡು ಲಕ್ಷ ರೂಪಾಯಿ ದತ್ತಿ ನಿಧಿ ಸ್ಥಾಪಿಸಿದ್ದು, ಕನ್ನಡದಲ್ಲಿ ಐಎಎಸ್ ಮಾಡಿದ ಅಭ್ಯರ್ಥಿಗಳಿಗೆ ಇದರ ಬಡ್ಡಿಯಿಂದ ಬಂಗಾರದ ಪದಕ ನೀಡುವ ವ್ಯವಸ್ಥೆಯನ್ನು ಮಾಡಿ ಈ ಮೂಲಕ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಅದಲ್ಲದೆ ಸ್ವರ್ಣವಲ್ಲಿ ಮಹಾಸಂಸ್ಥಾನ ಸ್ಥಾಪಿಸಿದ ಐಎಎಸ್ ತರಬೇತಿ ಸಂಸ್ಥೆ ಸ್ವಯಂಗೆ ಒಂದು ಲಕ್ಷ ದೇಣಿಗೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಅವಕಾಶ ಕಲ್ಪಿಸಿರುತ್ತಾರೆ. ತಮ್ಮ 89ರ ಇಳಿವಯಸ್ಸಿನಲ್ಲಿಯೂ ಚಿರ ಯುವಕರಂತೆ ಓಡಾಡುವ ಇವರು ಶಿಕ್ಷಣಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರಿಗೆ ಎಂಇಎಸ್ ನ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಹಾಗೂ ಎಂ ಇ ಎಸ್ ಪದಾಧಿಕಾರಿಗಳು, ಪ್ರಾಚಾರ್ಯ ಪ್ರೊ. ಜಿ ಟಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಈ ಮೂಲಕ ವಿನಂತಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top