ಶಿರಸಿ: ಫೆ.27ರಿಂದ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಮಾ.1ರಂದು ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ತಜ್ಞ, ಅಂಕಣಕಾರ ಶಿವಾನಂದ ಕಳವೆ ಭಾಗವಹಿಸಲಿದ್ದಾರೆ.
ಫೆ.27ರಂದು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿಲಿದ್ದು,ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮಗಳು ನಡೆಯಲಿದೆ. ಅಂತೆಯೇ ಮಾ.1ರಂದು ಬೆಳಿಗ್ಗೆ 11ಗಂಟೆಯಿಂದ ನಡೆಯುವ ‘ಪರಿಸರದ ಅಳಿವು-ಉಳಿವು’ ವಿಷಯಾಧಾರಿತ ಸಂವಾದದಲ್ಲಿ ಖ್ಯಾತ ಪರಿಸರ ತಜ್ಞ, ಅಂಕಣಕಾರ ಶಿವಾನಂದ ಕಳವೆ ಭಾಗವಹಿಸಲಿದ್ದಾರೆ.