ಕಾರವಾರ: ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದುಇದಕ್ಕೆ ಕಡಿವಾಣ ಹಾಕಲು ಈ ಬಾರಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಮನವಿ ಮಾಡಿಕೊಂಡರು.
ತಾಲೂಕಿನ ಮಾಜಾಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಬಂದ ನಂತರ ಸಿಲಿಂಡರ್ ಬೆಲೆ 450 ರೂಪಾಯಿಯಿಂದ 1200 ರೂಪಾಯಿಗೆ ಬಂದಿದೆ. ಅಡುಗೆ ಎಣ್ಣೆ ಬೆಲೆ ದುಪ್ಪಟವಾಗಿದೆ. ಪ್ರತಿ ವಸ್ತುವಿನ ಬೆಲೆ ಏರಿಕೆಯಿಂದ ಜನರು ಸಮಸ್ಯೆಗೆ ಸಿಲುಕಿದ್ದು ಇದಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದರು.
ಕಾಂಗ್ರೆಸ್ ಸರ್ಕಾರ ಬಂದರೆ ಹತ್ತು ಕೆಜಿ ಅಕ್ಕಿ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ, ನಿರುದ್ಯೋಗಿ ಯುವಕರಿಗೆ 3 ಸಾವಿರ ಗೌರವ ಧನ ಸೇರಿದಂತೆ ಹಲವು ಯೋಜನೆಯನ್ನ ಜಾರಿಗೆ ತಲಾಗುತ್ತದೆ. ಇದಕ್ಕೆ ಗ್ಯಾರಂಟಿಯಾಗಿ ಕಾರ್ಡ್ ಗಳನ್ನ ಸಹ ನೀಡಲಾಗಿದೆ. ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಜನರು ತಾವಾಗಿಯೇ ಕೇಳಿ ಗ್ಯಾರಂಟಿ ಕಾರ್ಡ್ ಗಳನ್ನ ಪಡೆಯುತ್ತಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಪರ ಹಲವು ಕಾರ್ಯಗಳನ್ನ ಮಾಡಿದರು. ಕ್ಷೇತ್ರದಲ್ಲಿ ಸುಮಾರು 1900 ಕೋಟಿ ಅನುಧಾನವನ್ನ ನೀಡಿ ಇಂದಿಗೂ ಜನರು ನೆನಸುವಂತಹ ಕೆಲಸವನ್ನ ಮಾಡಿದ್ದರು. ತನ್ನ ಅವಧಿಯಲ್ಲಿ ಸೇತುವೆ, ರಸ್ತೆ ಸೇರಿದಂತೆ ಹಲವು ಅಭಿವೃದ್ದಿ ಚಟುವಟಿಕೆಗಳು ಆಗಿದ್ದವು. ಜನರು ಬದಲಾವಣೆ ಬಯಸಿ ಬಿಜೆಪಿಗೆ ಮತ ಹಾಕಿದ್ದರು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಅಭಿವದ್ದಿ ಆಗಿದೆಯೇ. ಜನರಿಗೆ ಈ ಸರ್ಕಾರ ಯಾವ ರೀತಿ ಇದೆ ಎಂದು ತಿಳಿದಿದೆ. ಪಾನ್ ಕಾರ್ಡ್ ಆಧಾರ್ ಕಾರ್ಡಿಗೆ ಲಿಂಕ್ ಮಾಡಲು ಸಾವಿರ ರೂಪಾಯಿ ದಂಡ ಕಟ್ಟುವ ಪರಿಸ್ಥಿತಿ ಈ ಸರ್ಕಾರದಿಂದ ಬಂದಿದೆ. ಜನರು ಈ ಬಾರಿ ಬದಲಿಸಲು ತನಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಇನ್ನು ಛತ್ತಿಸಘಡ ಶಾಸಕ ವಿಕಾಸ್ ಉಪಾಧ್ಯ ಮಾತನಾಡಿ ಇಂದಿರಾ ಗಾಂಧಿ ಅವರು ರೇಷನ್ ಕಾರ್ಡನ್ನ ಚಾಲನೆಗೆ ತಂದು ಬಡವರಿಗೆ ಸರ್ಕಾರದ ಮೂಲಕ ಆಹಾರ ಧಾನ್ಯ ವಿತರಿಸುವ ಕಾರ್ಯ ಮಾಡಿದ್ದರು. ಇಂದಿಗೂ ಅವರನ್ನ ಜನರು ನೆನಸುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಬಡವರ ಪರ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದು. ಈ ಬಾರಿ ಸಹ ಗ್ಯಾರಂಟಿ ಕಾರ್ಡಗಳ ಮೂಲಕ ಬಡ ವರ್ಗ, ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಮುಂದಾಗಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸುವoತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೀನುಗಾರ ಮುಖಂಡ ರಾಜು ತಾಂಡೇಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಮುಖಂಡರಾದ ಸಂದೀಪ್, ಜಿ.ಪಿ ನಾಯಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.