ಇದು ನಮ್ಮ ದೇಶದ ನ್ಯಾಯ ! ದೇಶದ ವಿರುದ್ಧ ಘೋಷಣೆ ಕೂಗುವ ಅರ್ಧಂಬರ್ಧ ವಿಡಿಯೋ ವೈರಲ್ ಮಾಡುವ ಜಮಾನ ಇದು. ಅದೇ ಯೋಧನೊಬ್ಬನ ಮಗ ಮರ್ಯಾದೆಯಿಂದ ಪತ್ರಕರ್ತ ಆದರೆ ಆತಂಕವಾದಿ ಎನ್ನಲಾಗುತ್ತದೆ. ನಾರಾಯಣ ನಂಬಿಯಂತಹ ದೇಶಭಕ್ತ ವಿಜ್ಞಾನಿಯ ಜೈಲಿಗಟ್ಟಿದ ದೇಶ ಇದು.
ಹಾಗೆಂದೇ ಸರ್ಕಾರ ಯಾರದ್ದಾದರೇನು , ವ್ಯವಸ್ಥೆ ನಮ್ಮದೆಂಬ ದಾರ್ಷ್ಟ್ಯ ಬೆಳೆದಿದೆ. ಈ ಥರಹದ ದಾರ್ಷ್ಟ್ಯಕ್ಕೆ ಕಾರಣವೇನು? ಅಸಲಿಗೆ ಈ ಜನ ಯಾರು? ಕಪಿಲ್ ಮಿಶ್ರಾರಂತಹ ನೇತಾರರಿಗೂ ಸರ್ಕಾರ ನಮ್ಮದಾದರೇನು? ವ್ಯವಸ್ಥೆ ಅವರ ಕೈಲಿದೆ ಎನ್ನುವ ಪರಿಸ್ಥಿತಿ ಬಂದಿದೆ ಎಂದರೆ ಅವರ ವ್ಯವಸ್ಥೆ ಎಷ್ಟು ಬಲವಾಗಿರಬಹುದು ?
ಕಶ್ಮೀರ್ ಫೈಲ್ಸ್ ನ ದೃಶ್ಯವೊಂದರಲ್ಲಿ ಕಾಲೇಜಿನ ಪ್ರೊಫೆಸರ್ ಹೇಳುತ್ತಾರೆ,” ಸರ್ಕಾರ ಅವರದಾದರೇನು ? ವ್ಯವಸ್ಥೆ ನಮ್ಮದು” ಎಂದು. ಈ ಸಂಭಾಷಣೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ಅನಿಸುತ್ತದೆ. ಮೋದಿ ಸರ್ಕಾರಕ್ಕೂ ಕೆಲವೊಮ್ಮೆ ತಲೆ ತಗ್ಗಿಸುವಷ್ಟಾಗುತ್ತದೆ.
ಜ. ಬಿಪಿನ್ ರಾವತ್ ಹೇಳಿದ್ದರು “ದೇಶ ಮೂರನೆಯ ಎರಡುವರೆ ವೈರಿಗಳೊಡನೆ ಹೋರಾಡುತ್ತಿದೆ” ಎಂದು. ಇದರ ಅರ್ಥ ದೇಶದೊಳಗೆ ಕೆಲವರಿದ್ದಾರೆ. ಅವರ ಮನಸು ವೈರಿಗಳ ಕಡೆ ಇದೆ. ಅವರೊಂದಿಗೆ ಸೇನೆ ಹೋರಾಡಲಾಗದು ಎಂದು.
ಆ ಜನ ದೇಶದ ವಿರುದ್ಧವೇ ಮಸಲತ್ತು ನಡೆಸುತ್ತಾರೆ- ಈ ಬೌದ್ಧಿಕ ಸಮೂಹ ಎಲ್ಲೆಡೆಯೂ ವ್ಯಾಪಿಸಿ ಹುನ್ನಾರ ನಡೆಸುತ್ತದೆ. ಸಾಹಿತ್ಯ, ಫಿಲ್ಮ್, ರಾಜಕೀಯ, ಕ್ರೀಡೆ ನ್ಯಾಯಾಂಗದೊಳಗೂ ಇವರು ತೂರಿಕೊಂಡುಬಿಟ್ಟಿದ್ದಾರೆ. ದಿಲ್ಲಿಯ ಜಹಗೀರ್ಪುರಿ ದಂಗೆಯಲ್ಲಿ ಮೆರವಣಿಗೆ ಹೋಗುತ್ತಿದ್ದ ಹಿಂದೂಗಳ ಮೇಲೆ ದಾಳಿ ನಡೆಯಿತು. ಅರೋಪಿಯನ್ನು ಬಂಧಿಸಲು ಹೊರಟರೆ ಎರಡೇ ತಾಸಿನಲ್ಲಿ ಸುಪ್ರೀಂ ಕೋರ್ಟನಿಂದ ತಡೆಯಾಜ್ಞೆ ಬರುತ್ತದೆ. ಉತ್ತರಪ್ರದೇಶದಲ್ಲಿ ಸಿಎಎ ದಂಗೆ ನಡೆಸಿದವರ ಮನೆಯಿಂದಲೇ ನಷ್ಟ ತುಂಬುವ ಕಾರ್ಯ ಜರುಗುತ್ತದೆ. ಅದಕ್ಕೆ ಸುಪ್ರೀಂ ಕೋರ್ಟಿನಿಂದ ತಡೆ ಆದೇಶ. ಹಲ್ದಾನಿಯಲ್ಲಿ ರೇಲ್ವೆ ನಿಲ್ದಾಣದ ಒತ್ತುವರಿ ವಿರುದ್ದ ಕಾರ್ಯಾಚರಣೆ ಆದಾಗ ಸಹ ಈ ಗುಂಪು ಜಾಗೃತವಾಗಿ ಸುಪ್ರೀಂ ಕದ ತಟ್ಟುತ್ತದೆ, ಸುಪ್ರೀಂ ಮಾನವೀಯ ನೆಲೆಯಲ್ಲಿ ಗುಳೆ ಎಬ್ಬಿಸಬೇಡಿ ಎನ್ನುತ್ತದೆ.
ಸಿಎಎಯಲ್ಲಿ ಏನೂ ಹುರುಳಿರದೇ ಇದ್ದರೂ ಸಹ ಆರು ತಿಂಗಳ ಕಾಲದೇಶಾದ್ಯಂತ ಗೃಹಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃಷಿ ಕಾನೂನು ರೈತರ ಹಿತವಾಗೇ ಇದ್ದರೂ ಸಹ,ಹೆಸರಿಗೆ ಮಾತ್ರ ಕೃಷಿಕರಾಗಿ ಇರುವರನ್ನು ಮುಂದಾಗಿಸಿ ಖಲಿಸ್ತಾನಿ ಅಜೆಂಡಾ ಚಲಾಯಿಸಿದರು. ಗ್ರೆಟ ಥನ್ಬರ್ಗ್, ಮಿಯಾ ಖಲೀಫಾ, ರಿಹಾನಾರಂತಹವರಿಂದ ಟ್ವೀಟ್ ಮಾಡಿಸಿ ಟೂಲ್ಕಿಟ್ ದೊಂಬಿ ಎಬ್ಬಿಸಲಾಯಿತು. ಇದರಿಂದಾಗಿ ಸರ್ಕಾರ ಬಿಲ್ ವಾಪಸ್ ಪಡೆವ ಪ್ರಸಂಗ ಕೂಡ ಎದುರಾಯಿತು.
ಅಲ್ ಜಜೀರಾದೊಡನೆ ಎನ್ಡಿಟಿವಿ ಸುದ್ದಿ ಜೋಡಿಸಿ ಅಂತರಾಷ್ಟ್ರೀಯ ಸುದ್ದಿಯಾಗಿಸಿ ಕನ್ಹಯ್ಯಲಾಲ್ ರಂತವರನ್ನು ಕೂಡಿಸಿ ಮನ್ ಸೆ ಜುದಾ ತನ್ ಸೆ ಜುದಾ ಎಂದು ರಾಷ್ಟ್ರ ಒಡೆವ ಘೋಷಣೆ ಕೂಗಿದರು. ನೂಪುರ್ ಶರ್ಮಾ ಟಾರ್ಗೆಟ್ ಮಾಡಿದ ನಂತರ ಮತ್ತೆ ಕಾಜಲ್ ಹಿಂದುಸ್ತಾನಿ ಗುರಿಯಾಗಿಸಲಾಗಿದೆ.
ಹಾಗಾದರೆ ಈ ವ್ಯೂಹ ಹೇಗೆ ಕೆಲಸ ಮಾಡುತ್ತದೆ? ಇದಕ್ಕೆ ಬಲವೇನು? ಡಿಜಿ ಪಬ್ ಎಂದರೆ ಗೊತ್ತಿರಬಹುದು. ಇದೊಂದು ವಾಮಪಂಥೀಯ ವಿಚಾರವಾದದ ಗುಂಪು. ಹಲವಾರು ಪತ್ರಕರ್ತಗಳನ್ನು ಒಳಗೊಂಡು ಮೋದಿ ವಿರುದ್ದ- ದೇಶದ ವಿರುದ್ಧ ಕುತಂತ್ರ ನಡೆಸುವಂಥದ್ದು. ಅಹ್ಮದಾಬಾದ್ ಬಾಂಬ್ ಮಾಮಲೆಯಲ್ಲಿ ದೊಡ್ಡ ವಕೀಲರನ್ನು ಮುಂದಾಗಿಸಿ ಬೇಕಾದವರನ್ನು ಬಚಾವಾಗಿಸಲು ಪ್ರಯತ್ನ ಮಾಡುತ್ತಾರೆ.
ಕೇಂದ್ರ ಸರ್ಕಾರ ಅಥವಾ ಯಾವುದೇ ಬಿಜೆಪಿ ಜನಹಿತಕ್ಕಾಗಿ ಏನಾದರೂ ಮಾಡಹೊರಟಾಗ ಮಾನವ ಹಕ್ಕು, ಪತ್ರಕಾರರು, ವಕೀಲರು, ಕಲಾವಿದರೆರಲ್ಲ ಒಟ್ಟಾಗಿ ಅಡ್ಡಗಾಲು ಹಾಕುತ್ತಾರೆ. ಆಂದೋಲನ ನಡೆಸುತ್ತಾರೆ. ಹಸ್ತಾಕ್ಷರ ಅಭಿಯಾನ ಮಾಡುತ್ತಾರೆ. ಅದೇ ರಾಷ್ಟ್ರವಾದಿ ಪತ್ರಕರ್ತರ ಮೇಲೆ ದಾಳಿ ಆದಾಗ ಬಿಂದೆ ಸರಿಯುತ್ತಾರೆ. ಅಲ್ಲದೆ ಅಂತಹವರ ಗುರಿಯಾಗಿಸಿ ಹತ್ತಿಕ್ಕುವ ಯತ್ನ ಸಹ ಮಾಡುತ್ತಾರೆ.
ಮನೀಷ್ ಕಶ್ಯಪ್; ಬಿಹಾರಿ ಕೆಲಸಗಾರರನ್ನು ತಮಿಳುನಾಡಿನವರು ಥಳಿಸಿದರೆಂದು ವರದಿ ಮಾಡಿದ ಕಾರಣಕ್ಕೆ ವಿಚಾರಣೆಗೆ ಒಳಗಾದವರು. ಅವರ ಮೇಲೆ ಎನ್ ಎಸ್ ಎ ನ್ಯಾಶನಲ್ ಸೆಕ್ಯುರಿಟಿ ಆಕ್ಟ್ ಹಾಕಲಾಯಿತು. ಈ ಕಾನೂನಿನ್ವಯ ವ್ಯಕ್ತಿಯು ದೇಶಕ್ಕೆ ಅಪಾಯ ತರುವನೆಂದು ಭಾವಿಸಿ ಮೂರು ತಿಂಗಳ ಕಾಲ ಬಂಧಿಸಿಡಬಹುದಾಗಿದೆ. ಹನ್ನೆರಡು ತಿಂಗಳ ವರೆಗೂ ಅವಧಿ ವಿಸ್ತರಿಸಬಹುದು. ಇದು ಬ್ರಿಟಿಪಷ್ ಕಾಲದ ಕಾನೂನು, 1911 ಬಂಗಾಳ ರೆಗ್ಯುಲೇಶನ್ ೩ ಹೆಸರಿನಿಂದ ಕರೆಯಲಾಗುತ್ತಿತ್ತು. 1919 ರೌಲೆಟ್ ಆಕ್ಟ್ ಅಡಿ ವಿಚಾರಣೆಗೂ ಹಾಜರು ಪಡಿಸದೆ ಬಂಧಿಸಬಹುದಾಗಿತ್ತು. ಸ್ವತಂತ್ರ ಭಾರತದಲ್ಲಿ ನೆಹರೂ 1950ರಲ್ಲಿ ಪ್ರಿವೆಂಟಿವ್ ಡಿಟೆನ್ಸಿ ಆಕ್ಟ್ ತಂದರು. 1980 ರಲ್ಲಿ ಇಂದಿರಾ ಗಾಂಧಿಯವರು ಇದನ್ನು ಸಂಸತ್ತಿನಲ್ಲಿ ಮಂಡಿಸಿ ಕಾನೂನೇ ಮಾಡಿಬಿಟ್ಟರು. ಯಾವುದೇ ರಾಜ್ಯ ಸರ್ಕಾರ ಈ ಕಾನೂನಿನಡಿ ವ್ಯಕ್ತಿಯನ್ನು ಬಂಧಿಸಿಡಬಹುದು.
ಶರ್ಜಿಲ್ ಇಮಾಮ್ ಬಂಗಾಳ ವಿಭಜಿಸಿ ಭಾರತ ಒಡೆವ ಮಾತಾಡುತ್ತಾನೆ. ಇಡೀ ಲೆಪ್ಟ್ ಲಿಬರಲ್ ಇವನೊಟ್ಟಿಗೆ ನಿಲ್ಲುತ್ತದೆ. ಇವನು ಮಾಡಿದ ಭಾಷಣ ನೋಡಬೇಕು. ಅಲ್ಟ್ ನ್ಯೂಸ್ ಸಹ ಸಂಸ್ಥಪ ಮೊಹಮದ್ ಜುಬೇರ್ ನನ್ನು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಕಾರಣಕ್ಜೆ ದೆಲ್ಲಿ ಪೋಲಿಸರು ವಿಚಾರಣೆ ನಡೆಸುತ್ತಾರೆ. ಐಪಿಸಿ 100ಎಎಎ,295 ಅಡಿ ವಿಚಾರಣೆ ನಡೆಸುತ್ತಾರೆ. ಆಗ ” ಐಸ್ಟಾಂಡ್ ವಿಥ್ ಜುಬೇರ್ ” ಅನ್ನುವ ಸೋಷಿಯಲ್ ಮಿಡಿಯಾ ಟ್ರೆಂಡ್ ಶುರುವಾಗುತ್ತದೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾ ವಿಚಾರಣೆಯನ್ನು ಖಂಡಿಸುತ್ತದೆ. ಇದೇ ಜುಬೇರ್ ಈಗ ಕಾಜಲ್ ಹಿಂದುಸ್ತಾನ್ ಅಂತಹ ಸಮಾಜ ಸೇವಕರಿಗೆ ಧಮ್ಕಿ ಹಾಕುವ ಬೆದರಿಕೆ ಒಡ್ಡುವ ಕಾರ್ಯದ ಹಿಂದಿರಬಹುದೆಂದು ಮೀಡಿಯಾ ಪಂಡಿತರ ಲೆಕ್ಕಾಚಾರ. ನೂಪುರ ಶರ್ಮಾಗೂ ಹೀಗೆ ಆಗಿತ್ತಲ್ಲ.
ಇಂಥಹ ಷಡ್ಯಂತ್ರಿಗಳಿಗೆ ಯಾವ ಕಾನೂನೂ ತೊಡಕಲ್ಲ, ಎನ್ಎಸ್ಎಯೂ ಲಾಗೂ ಆಗುವುದಿಲ್ಲ. ಸೊಷಿಯಲ್ ಮೀಡಿಯಾದಲ್ಲಿ ಗಲಭೆ ಎಬ್ಬಿಸಿ ಆರಾಮಾಗಿ ಯಾವ ಭಯವೂ ಇಲ್ಲದೆ ತಿರುಗಾಡಿಕೊಂಡಿರುತ್ತಾರೆ. ಅಲ್ಲದೇ ದೇಶದಲ್ಲಿ ಅಸಹಿಷ್ಣುತೆ ಇದೆ ಎನ್ನುತ್ತಾರೆ ನೋಡಿ.
ನಿಜಕ್ಕೂ ಈ ಮನೀಷ್ ಕಶ್ಯಪ್ ಯಾರು? ತಪ್ಪಿತಸ್ಥನೋ ಅಥವಾ ಯಾರದ್ದಾದರೂ ಹುನ್ನಾರದಿಂದ ಸಿಕ್ಕಿಹಾಕಿಕೊಂಡಿದ್ದಾನೋ ಕಾದು ನೋಡಬೇಕಷ್ಟೇ ! ನಂಬಿ ನಾರಾಯಣ್ ಅವರ ಪ್ರಕರಣವಾದಂತೆ.
ಏನೋ ಅಡಗಿದೆ ಎಂಬುದಂತೂ ಸತ್ಯ.
ಎಲ್ಲಿವರೆಗೆ ಈ ರೀತಿ ನಡೆಯುವುದು? ವ್ಯವಸ್ಥೆ ಸರಿ ಆಗುವುದು ಯಾವಾಗ?