ಹಿಂದೆಲ್ಲ ತಾರತಮ್ಯ ಎನ್ನುವುದು ಕಪ್ಪು, ಬಿಳಿ, ಕೆಂಪು ,ಕಂದು ಹೀಗೆ ವರ್ಣಾಧಾರಿತವಾಗಿತ್ತು. ಈಗ ತಾರತಮ್ಯ ಎಂಬುದು ಧರ್ಮದ ರೂಪ ಪಡೆದು ಮುಂದುವರೆಯುತ್ತಿದೆ. ಇದು ಹಿಂದು ಮಕ್ಕಳನ್ನು ಗುರಿಯಾಗಿಸಿಕೊಂಡು ತಾರತಮ್ಯ ಆಗುತ್ತಿರುವುದು ಮತ್ತಿನ್ನೆಲ್ಲೂ ಅಲ್ಲ ಭಾರತೀಯ ಮೂಲದ ಹಿಂದು ಧರ್ಮೀಯರೇ ಅಧ್ಯಕ್ಷರಾಗಿರುವ ಇಂಗ್ಲೆಂಡ್‌ನಲ್ಲಿ. ಇಂಗ್ಲೆಂಡ್ ಶಾಲೆಗಳಲ್ಲಿ ಹಿಂದು ಧರ್ಮದ ಮಕ್ಕಳಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಇಲ್ಲ ಕಷ್ಟ ಅನುಭವಿಸಿ ಎಂದು ಸಹಪಾಠಿಗಳಿಂದ ಬೆದರಿಕೆ ಬರುತ್ತಿದೆ. ಜಾತ್ಯತೀತವಾದ ರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿ ಆತಂಕಕ್ಕೆಡೆಮಾಡಿಕೊಟ್ಟಿದೆ.
ಇಂಗ್ಲೆಂಡ್ನಲ್ಲಿ ಹೆನ್ರಿ ಜಾಕ್ಸನ್ ಸೊಸೈಟಿ ನಡೆಸಿದ ಸರ್ವೆಯಿಂದ ಈ ವಾದವು ಪುಷ್ಟಿಗೊಂಡಿದೆ. ಒಂದು ಸಾವಿರ ಪಾಲಕರನ್ನು ಸಂದರ್ಶಿಸಲಾಗಿತ್ತು. ಅದರ ಫಲಿತಾಂಶ ಆತಂಕಕಾರಿಯಾಗಿದೆ.
1. ಮತಾಂತರವಾಗಿ ಇಲ್ಲ ನೀವು ತೊಂದರೆಗೊಳಗಾಗತ್ತೀರಿ ಎಂದು ಬೆದರಿಕೆ.
2. ಓರ್ವ ಹುಡುಗಿಯ ಮೇಲೆ ದನದ ಮಾಂಸ ಎಸೆಯಲಾಗಿದೆ.
3. ನಮ್ಮ ಧರ್ಮ ನಂಬದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಹೆದರಿಸಲಾಗಿದೆ.
4. ಹಿಂದು ಮಕ್ಕಳನ್ನು ಕಾಫಿರರೆಂದು ಕರೆಯಲಾಗಿದೆ, ಇತ್ಯಾದಿ.
ಸಂಸದರಾದ ಇದು ಬೆನ್ ಎವ್ರಿಟ್ ಅವರು ಈ ವಿಷಯ ಅಪಾಯಕಾರಿ, ಆಘಾತಕಾರಿ ಎಂದು ಕರೆದಿದ್ದು ಇದು ಎಲ್ಲಿಂದ ಹೇಗೆ ಯಾರಿಂದ ಬಂತು ಎಂದು ಸರ್ಕಾರ ತಿಳಿಯಬೇಕೆಂದು ಹೇಳಿದ್ದಾರೆ. ಯುಕೆಯಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದು ಧರ್ಮಾಧಾರಿತವಾಗಿ ದ್ವೇಷ ಎದುರಿಸುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
YouTube Link: https://youtu.be/9qeCaXEczLQ