Slide
Slide
Slide
previous arrow
next arrow

ದೇಶದ ಮೂಲೆ ಮೂಲೆಗೂ ಕೇಂದ್ರದ ಯೋಜನೆಗಳು ತಲುಪಿವೆ: ಶ್ರೀಪಾದ ನಾಯ್ಕ

300x250 AD

ಕಾರವಾರ: ಬಿಜೆಪಿ ಸರ್ಕಾರದಿಂದ ದೇಶದ ಮೂಲೆ ಮೂಲೆಗೂ ಯೋಜನೆಗಳು ತಲುಪಿ ನಿರಂತರ ಅಭಿವೃದ್ಧಿಯಾಗುತ್ತಿದ್ದು, ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ವಿನಂತಿಸಿದರು.
ಬೈತಕೋಲ್‌ದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ದೇಶದ ಉನ್ನತಿಗೆ ಬಿಜೆಪಿ ಸರ್ಕಾರ ಭದ್ರ ಬುನಾದಿಯನ್ನು ಹಾಕಿದೆ. ಏಳು ದಶಕಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದರು. ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. 2014 ರ ನಂತರ ಪ್ರಧಾನಿ ನರೇಂದ್ರ ಮೋದಿಜೀ ನೇತೃತ್ವದ ಸರ್ಕಾರದ ಸಾಧನೆ ವಿಶ್ವವನ್ನೇ ಮೆಚ್ಚಿಸುವಂತಹ ಕಾರ್ಯಮಾಡುತ್ತಿದೆ ಎಂದರು.
ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಹಿಂದಿನ ಸರ್ಕಾರಗಳು ಮೀನುಗಾರ, ಹಾಲಕ್ಕಿ ಹೀಗೆ ವಿವಿಧ ಸಮಾಜವನ್ನು ಕಡೆಗಣಿಸಿದೆ. ನಮ್ಮ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿoದ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಮೀನುಗಾರ ಸಮಾಜದವರಿಗೆ ಕೂಡ ಕೃಷಿಕರ ಮಾದರಿಯಲ್ಲಿ ಕಿಸಾನ್ ಕಾರ್ಡ್ನ್ನು ನೀಡಿದ್ದೇವೆ. ಮೀನುಗಾರ ಸಮಾಜದವರಿಗೆ ಯಾವುದೇ ರೀತಿಯ ಅನ್ಯಾಯವನ್ನು ಮಾಡಿಲ್ಲ ಎಂದರು.
ಬಿಜೆಪಿ ಸರ್ಕಾರ ಬಂದಾಗ ಸಾಲಮನ್ನಾ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಲಮನ್ನಾ ಮಾಡಿದರು. ಅಲ್ಲದೇ, ಮೀನುಗಾರ ಸಮಾಜದವರಿಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಮೀನುಗಾರರಿಗೆ ಅವಶ್ಯಕವಾಗಿರುವ ಮಾಜಾಳಿಯಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಬೆಳಂಬರದಲ್ಲಿ ಬಂದರು ಇದರಿಂದ ವಿವಿಧ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ. ತಾವೆಲ್ಲರೂ ಆರ್ಥಿಕವಾಗಿ ಸದೃಢರಾಗಬಹುದಾಗಿದೆ. ಒಣಮೀನು ಪ್ಯಾಕೆಟ್ ಮಾಡುವುದು. ಸಣ್ಣ ಸಣ್ಣ ಉದ್ಯಮ ಸ್ಥಾಪನೆ, ಮೂಲಭೂತ ಸೌಕರ್ಯಗಳನ್ನು ಮಾಡಲು ಅನುದಾನವನ್ನು ಒದಗಿಸಿದ್ದೇನೆ ಎಂದರು.
ಮೀನುಗಾರರ ಪರವಾಗಿಯೇ ಇದ್ದೇನೆ. ನನ್ನ ವಿರುದ್ದ ಅಪಪ್ರಚಾರ ಮಾಡಿದ್ದರು. ಸಾಗರ ಮಾಲಾ ಯೋಜನೆಯಲ್ಲಿ ಅಮಾಯಕರನ್ನು ಬಳಸಿಕೊಂಡರು. ಕಾಂಗ್ರೆಸ್ ಸರ್ಕಾರ ಇದ್ದಾಗ ಅದರ ಅಡಿಪಾಯ ಹಾಕಿದ್ದರು. ನನ್ನ ಕ್ಷೇತ್ರದ ಜನರಿಗೆ ಯಾವುದು ಅವಶ್ಯಕವೋ ಅದರ ಪರವಾಗಿ ನಾನು ಇರುತ್ತೇನೆ. ಅವರಿಗೆ ಬೇಡವಾದಲ್ಲಿ ನಾನು ಅದನ್ನು ವಿರೋಧಿಸುತ್ತೇನೆ ಎಂದರು.
ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ನೀಡಿ ಜನರ ರಕ್ಷಣೆಗೆ ಮುಂದಾದವರು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು. ಅವರಿಗೆ ನಾವು ಚಿರ ಋಣಿಯಾಗಿದ್ದೇವೆ. ವ್ಯಾಕ್ಸಿನ್ ಕುರಿತು ಕೂಡ ವಿರೋಧಗಳು ಅಪಪ್ರಚಾರ ಮಾಡಿದರು. ಮೀನುಗಾರರಿಗೆ ಮನೆಗಳಿಲ್ಲ. ಸಿಆರ್‌ಝಡ್ ನಿಯಮದಿಂದ ಸಮಸ್ಯೆಯಾಗುತ್ತಿದೆ. ಅದನ್ನು ನಿವಾರಣೆ ಮಾಡಲು ಹಿಂದೆ ಪ್ರಯತ್ನಿಸಿದ್ದೇನೆ ಎಂದರು.
ಮೀನುಗಾರರಿಗಾಗಿ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಮೀನುಗಾರಿಕೆ ಹಾಗೂ ನೀರಾವರಿಗಾಗಿ ಹೊಸ ಸಚಿವಾಲಯವನ್ನು ಪ್ರಾರಂಭಿಸಿದರು. ಕಿಸಾನ್ ಕಾರ್ಡ್ ಮೂಲಕ ಎರಡು ಲಕ್ಷ ರೂ.ವರೆಗೆ ಸಾಲವನ್ನು ಒದಗಿಸುವ ಯೋಜನೆಯನ್ನು ಮೋದಿಜೀ ಅವರು ಜಾರಿಗೆ ತಂದಿದ್ದರೆ. ಈ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಆಗುತ್ತಿವೆ. ಜನರಿಗೆ ಅನುಕೂಲವಾಗುವಂತೆ ಅವಶ್ಯ ಕಾಮಗಾರಿಗಳನ್ನು ತಂದಿದ್ದೇನೆ. ಈ ಬಾರಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ನನಗೆ ಸ್ಪರ್ಧಿಸಲು ಅವಕಾಶವನ್ನು ನೀಡಿದೆ. ನೀವೆಲ್ಲರೂ ನನಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮತಯಾಚನೆ ಮಾಡಿದರು.
ವಿಧಾನಪರಿಷತ್ ಶಾಸಕರಾದ ಗಣಪತಿ ಉಳ್ವೇಕರ ಮಾತನಾಡಿ, ಶಾಸಕಿ ರೂಪಾಲಿ ನಾಯ್ಕ ಅವರು ಒಬ್ಬ ಮಹಿಳೆಯಾಗಿ ಕಾರವಾರ ಅಂಕೋಲಾ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಯಾವ ಶಾಸಕರು ಮಾಡದ ಕಾರ್ಯವನ್ನು ಅವರು ಮಾಡಿ ತೋರಿಸಿದ್ದಾರೆ. ಅವರನ್ನು ನಾವು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಪ್ರೇಮೇಂದ್ರ ಶೇಟ್, ಮಂಡಲಾಧ್ಯಕ್ಷ ನಾಗೇಶ ಕುರ್ಡೇಕರ, ನಿತಿನ್ ಪಿಕಳೆ, ಜಿಲ್ಲಾ ವಕ್ತಾರರಾದ ನಾಗರಾಜ ನಾಯಕ, ಪ್ರಮುಖರಾದ ಮನೋಜ ಭಟ್, ಪಿ.ಪಿ.ನಾಯ್ಕ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top