Slide
Slide
Slide
previous arrow
next arrow

ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಿದ ಮಸ್ತಾನೆಯ ಗ್ರಾಮಸ್ಥರು

300x250 AD

ಸಿದ್ದಾಪುರ: ಗ್ರಾಮಕ್ಕೆ ಇದುವರೆಗೆ ಯಾವುದೇ ರೀತಿಯ ಮೂಲಸೌಕರ್ಯ ಒದಗಿಸದೆ ಇರುವುದರಿಂದ 2023ರ ವಿಧಾನಸಭಾ ಚುನಾವಣೆಯನ್ನು ಬಹಿಚ್ಕರಿಸುತ್ತೇವೆ ಎಂದು ಕೋಡ್ಕಣಿ ಗ್ರಾಮದ ಮಸ್ತಾನೆಯ ಗ್ರಾಮಸ್ಥರು ತಿಳಿಸಿದ್ದಾರೆ.

ತಾಲೂಕು ಕೊಡ್ಕಣಿ ಹೋಬಳಿಯ ಕೋಡ್ಕಣಿ ಗ್ರಾಮದ ಮಸ್ತಾನೆಯ 30 ಮನೆಯಲ್ಲಿ 240 ಜನರು ವಾಸ್ತವ ಹೊಂದಿದ್ದು ಸ್ವಾತಂತ್ರ‍್ಯ ಬಂದ ಇಲ್ಲಿಯವರೆಗೆ ಮಸ್ತಾನೆ ಕುಗ್ರಾಮವಾಗಿ ಉಳಿದಿದ್ದು, ಇಲ್ಲಿಯವರೆಗೂ ನಮ್ಮ ಶಾಸಕರು ಸಂಸದರು ಇತರೆ ಜನಪ್ರತಿನಿಧಿಗಳು ಊರಿನ ಸಾರ್ವಜನಿಕ ಮೂಲಸೌಕರ್ಯಗಳ ಅಗತ್ಯತೆ ಹಾಗೂ ಕುಂದುಕೊರತೆಗಳಿಗೆ ಸ್ಪಂದಿಸದೆ ನಮ್ಮ ಊರನ್ನು ಮೂಲಸೌಕರ್ಯ ವಂಚಿತ ಊರನ್ನಾಗಿ ಮಾಡಿದ್ದಾರೆ. ಈ ಕುರಿತು ನಾವು ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆ, ಹಲಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಸಿದ್ದಾಪುರ ತಾಲೂಕು ತಹಶೀಲ್ದಾರ್, ಉಪವಿಭಾಗಾಧಿಕಾರಿಗೆ ನಮ್ಮ ಊರಿನ ಮೂಲಸೌಕರ್ಯಗಳ ಅಗತ್ಯತೆಯನ್ನು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದರು ಇದುವರೆಗೆ ಯಾವುದೇ ಸಾರ್ವಜನಿಕ ಮೂಲಸೌಲತ್ತುಗಳಾಗಲಿ ನಮಗೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

300x250 AD

ಆದಕಾರಣ ನಾವು 2023 ವಿಧಾನಸಭಾ ಚುನಾವಣೆಯನ್ನು ಚುನಾವಣೆಯಲ್ಲಿ ಮತದಾನ ಮಾಡದೆ ನಮ್ಮ ಊರಿನ ಸಾರ್ವಜನಿಕ ಮೂಲಭೂತ ಸೌಕರ್ಯ ಪಡೆದುಕೊಳ್ಳಲು ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಮಾವಿನಗುಂಡಿ ಹೊನ್ನಾವರ ಪ್ರಮುಖ ಮಾರ್ಗದಲ್ಲಿ ಇರುವಂತ ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ನೀರಿನ ಸೌಲಭ್ಯ ಇಲ್ಲ. ಬೀದಿದೀಪಗಳ ವ್ಯವಸ್ಥೆಗಳಿಲ್ಲ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ. ಆದ ಕಾರಣ ನಾವು ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಊರಿನ ಪ್ರವೇಶ ದ್ವಾರದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಪ್ರತಿಭಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಇಂದಿರಾ ಟಿ. ನಾಯ್ಕ ಭೇಟಿ ನೀಡಿ ಮತದಾನ ಬಹಿಷ್ಕಾರ ಮಾಡದಂತೆ ಮನವೊಲಿಸಲು ಪ್ರಯತ್ನಿಸಿದರು. ನಮ್ಮ ಬೇಡಿಕೆ ಇಡೇರದಿದ್ರೇ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top