• Slide
    Slide
    Slide
    previous arrow
    next arrow
  • ಅರಣ್ಯ ಅತಿಕ್ರಮಣದಾರರ ಹಿತರಕ್ಷಣೆಗೆ ಎಂದಿಗೂ ಬದ್ಧ: ವಿಶ್ವೇಶ್ವರ ಹೆಗಡೆ ಕಾಗೇರಿ

    300x250 AD

    ಶಿರಸಿ: ಕ್ಷೇತ್ರದ ಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆಗೆ ಈವರೆಗೂ ಪ್ರಯತ್ನಿಸಿದ್ದೇನೆ. ಜನರೂ ಸಹ ಶಾಂತಿಯುತವಾಗಿ ಬದುಕು ನಡೆಸಲು ಅಗತ್ಯ ವಾತಾವರಣವನ್ನು ನಾವೆಲ್ಲರೂ ನಿರ್ಮಿಸಿದ್ದೇವೆ. ಮುಂದೆಯೂ ಈ ಬಗ್ಗೆ ಶ್ರಮಿಸುವುದಾಗಿ ಶಿರಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ತಾಲೂಕಿನ ಕುಳವೆ ಪಂಚಾಯ್ತಿಯ ಕಾಗೇರಿ, ಕುಳವೆ, ಕೆಂಚಗದ್ದೆ ಭಾಗದಲ್ಲಿ ವಿಶ್ವೇಶ್ವರ‌ ಹೆಗಡೆ ಮತಯಾಚನೆ ಮಾಡಿ, ಮಾತನಾಡಿದರು.

    ಕುಳವೆ ಪಂಚಾಯತ ವ್ಯಾಪ್ತಿಗೆ ಸುಮಾರು 6 ಕೋಟಿ ರೂಪಾಯಿಗಳ ಅನುದಾನ ತಂದಿದ್ದೇನೆ. ಇಲ್ಲಿನ ರಸ್ತೆ, ಸೇತುವೆ, ಕಾಲುಸಂಕ, ನೀರಾವರಿ ಚೆಕ್ ಡ್ಯಾಂಗಳು ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ.

    ಅರಣ್ಯ ಅತಿಕ್ರಮಣ ಜಾಗದಲ್ಲಿ ವಾಸವಿರುವವರ ಹಿತ ರಕ್ಷಣೆಗೆ ನಾನೂ ಎಂದಿಗೂ ಬದ್ಧನಿದ್ದು, ಸಭಾಧ್ಯಕ್ಷನಾಗಿ ನಾನು ಈ ಭಾಗದ ಅರಣ್ಯ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಸರ್ಕಾರದ ಮೂಲಕ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಸರ್ಕಾರದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಅರಣ್ಯ ಅತಿಕ್ರಮಣದಾರರ ಹಿತಕಾಯುವಂತೆ ಅಪಿಡವಿಟ್ ಕೊಟ್ಟಿದ್ದೇವೆ. ಇದರೊಂದಿಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಆಶ್ರಯ ಮನೆ ಯೋಜನೆಯಲ್ಲಿ ಅರಣ್ಯ ಅತಿಕ್ರಮಣ ಜಾಗದಲ್ಲಿ ವಾಸವಿರುವವರಿಗೆ ಮನೆ ನಂಬರ್ ಆಧಾರದ ಮೇಲೆ ಮನೆ ನೀಡುವಂತೆ ಆದೇಶ ನೀಡುವಂತೆ ಆಗ್ರಹಿಸಿದ್ದು, ಇಂದು ಅತಿಕ್ರಮಣದಲ್ಲಿ ವಾಸವಿರುವವರೂ ಆಶ್ರಯ ಮನೆ ಯೋಜನೆಯಡಿ ಮನೆ ಪಡೆಯುವಂತೆ ಮಾಡಿದ್ದೇನೆ ಎಂದರು.

    300x250 AD

    ಅಭಿವೃದ್ಧಿಯನ್ನು ಸಹಿಸದ ಕಾಂಗ್ರೆಸ್ ನಾಯಕರು ನಾನು ಕ್ಷೇತ್ರಕ್ಕೆ ತಂದ 5000 ಮನೆಗಳು ವಾಪಸ್ಸಾಗಿದೆ ಎಂದು 2018ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಮಾಡಿದ ಆದೇಶವನ್ನು ಉಲ್ಲೇಖಿಸಿದ್ದ ಲೇಖನವನ್ನು ಈಗ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಜನತೆ ಈ ಎಲ್ಲ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಉಷಾ ಹೆಗಡೆ, ನಾಗರಾಜ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಭಟ್, ವಸಂತ ಭಟ್ಟ, ಶಕ್ತಿಕೇಂದ್ರ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top