• Slide
    Slide
    Slide
    previous arrow
    next arrow
  • ಲಕ್ಷ ಬಾಗಿನಿಯರಿಗೆ ಬಾಗಿನ ಪ್ರದಾನ

    300x250 AD

    ಸಿದ್ದಾಪುರ: ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ಗೋಸ್ವರ್ಗ ಸೇರಿದಂತೆ ಗೋಸೇವೆಗಾಗಿ ರೂಪಿಸಿದ ‘ಲಕ್ಷಬಾಗಿನಿ’ ಯೋಜನೆಗೆ ಎಲ್ಲೆಡೆಯಿಂದ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ.
    ಮುಂಬೈ, ಬೆಂಗಳೂರು, ಮಂಗಳೂರಿನoತಹ ಮಹಾನಗರಗಳ ನಿವಾಸಿ ಮಹಿಳೆಯರಲ್ಲದೇ ಗ್ರಾಮಾಂತರ ಭಾಗದ ಮಹಿಳೆಯರೂ ಈ ಯೋಜನೆಗೆ ಸ್ಪಂದಿಸಿ ಸೇವೆಯಲ್ಲಿ ತೆಡಗಿಸಿಕೊಂಡು ಯೋಜನೆಯನ್ನು ಪೂರೈಸಿ ಶ್ರೀ ಗುರುಪೀಠದಿಂದ ಬಾಗಿನ ಪಡೆದು ಸಾರ್ಥಕತೆ ಪಡೆಯುತ್ತಿದ್ದಾರೆ. ಕೇವಲ ಹವ್ಯಕ ಮಹಿಳೆಯರಲ್ಲದೇ ವಿವಿಧ ಸಮಾಜಗಳ ಮಹಿಳೆಯರೂ ಈ ಸತ್ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
    ಭಾನ್ಕುಳಿಯ ಶ್ರೀ ರಾಮದೇವಮಠ ಗೋಸ್ವರ್ಗದಲ್ಲಿ ನಡೆದ ಶಂಕರಪoಚಮಿ ಉತ್ಸವದಲ್ಲಿ ಲಕ್ಷಬಾಗಿನಿಯರಿಗೆ ಶ್ರೀ ರಾಘವೇಶ್ವರಭಾರತೀ ಶ್ರೀಗಳವರು ಬಾಗಿನ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಬೋವಿ ಸಮಾಜದ ಶ್ರೀಮತಿ ಮಂಗಲಾ ಅನಂತ ಬೈಂದೂರು ಇವರೂ ಸಹ ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ ನೀಡುವ ಮೂಲಕ ಲಕ್ಷಬಾಗಿನಿಯಾಗಿ ಗುರುತಿಸಿಕೊಂಡು ಪ್ರಶಂಸೆಗೆ ಪಾತ್ರವಾಗಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top