Slide
Slide
Slide
previous arrow
next arrow

ಮಕ್ಕಳ ಸಾಧನೆಗೆ ಪಾಲಕರ ಪ್ರೋತ್ಸಾಹ ಅತ್ಯಗತ್ಯ; ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ಪ್ರತಿಭೆ ಗುರುತಿಸಿ ಪ್ರೋತ್ಸಾಹವನ್ನು ಪಾಲಕರು‌ ನೀಡಿದರೆ ಎಲ್ಲ ಮಕ್ಕಳೂ ಅನನ್ಯ ಸಾಧಕರಾಗುತ್ತಾರೆ ಎಂದು‌ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು‌.

ಅವರು ತಾಲೂಕಿನ ‌ಮೆಣಸಿಯ ಯಕ್ಷಸಿರಿ ಮತ್ತು ಸಾಂಸ್ಕೃತಿಕ ವೇದಿಕೆಯು ನಡೆಸುವ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ‌ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಕ್ಕೆ ಕಡೆಮನೆಕಟ್ಟೆ ಶಾಲಾ ಆವಾರದಲ್ಲಿ ಚಾಲನೆ‌ ನೀಡಿ ಮಾತನಾಡಿದರು.
ಮಕ್ಕಳನ್ನು ಮೊಬೈಲ್ ದಿಂದ‌ ದೂರ ಇಡಲು ಇಂಥ ಶಿಬಿರಗಳು ಪ್ರಯೋಜನಕಾರಿ. ಶಿಬಿರಗಳಿಗೆ‌ ಮಕ್ಕಳನ್ನು ಕಲಿಸಿದರೆ ಅವರೊಳಗಿನ ಪ್ರತಿಭೆ ಕೂಡ ಅನಾವರಣವಾಗುತ್ತದೆ ಎಂದರು.
ಪತ್ರಕರ್ತ ಕಿರಣ್ ಮೆಣಸಿ, ಬೇಸಗೆ ಶಿಬಿರಗಳು, ಅದರಲ್ಲೂ ಯಕ್ಷಗಾನದಂಥ ಶಿಬಿರಗಳು ನಮ್ಮ ನೆಲದ ಸತ್ವ ಕಲಿಸುತ್ತವೆ ಎಂದರು.
ಯಕ್ಷಾಭಿಮಾನಿ ಗಿರಿಧರ ಕಬ್ನಳ್ಳಿ, ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಬಾಲ ಕಲಾವಿದೆ ತುಳಸಿ ಹೆಗಡೆ, ಶಾಲಾ‌ ಮುಖ್ಯಾಧ್ಯಾಪಕ ಎ. ಕೆ. ನಾಯ್ಕ ಮತ್ತು ಅಧ್ಯಕ್ಷತೆವಹಿಸಿದ್ದ ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಹರಿಹರ ಗಣಪತಿ ಭಟ್ಟ ಭೂಸನಕೇರಿ, ವೇದಿಕೆ ಅಧ್ಯಕ್ಷ ಗಣಪತಿ ಎಸ್.ಹೆಗಡೆ ಕಡೇಮನೆ ಮಾತನಾಡಿದರು.
ಇದೇ ವೇಳೆ ಯಕ್ಷಗಾನ ಗುರುಗಳಾದ ನರೆಂದ್ರ ಅತ್ತಿಮುರಡು, ಬಾಲ ಯಕ್ಷಗಾನ‌ ಕಲಾವಿದೆ ತುಳಸಿ ಹೆಗಡೆ, ಬಾಲ ಚಂಡೆ ವಾದಕ ಶ್ರೀವತ್ಸ ಗುಡ್ಡೆದಿಂಬ ಅವರನ್ನು ಪುರಸ್ಕರಿಸಲಾಯಿತು.
ಬಳಿಕ ಗಜಾನನ ಭಟ್ಟ ತುಳಗೇರಿ ಮಾರ್ಗದರ್ಶನ, ನರೇಂದ್ರ ಅತ್ತಿಮುರಡು ನಿರ್ದೇಶನದಲ್ಲಿ ದ್ರೌಪತಿ ಪ್ರತಾಪ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.
ಹಿಮ್ಮೇಳದಲ್ಲಿ ಗಜಾನನ ಭಾಗವತ್, ಮಂಜುನಾಥ ಗುಡ್ಡೆದಿಂಬ, ಶ್ರೀವತ್ಸ‌ ಗುಡ್ಡೆದಿಂಬ ಸಹಕಾರ ನೀಡಿದರು. ವಿನಯ ಭಟ್ಟ ಕೋಳಿಗಾರ, ಉಮೇಶ ಹೆಗಡೆ, ವೆಂಕಟೇಶ ಬೊಗ್ರಿಮಕ್ಕಿ ವೇಷಭೂಷಣ ಸಹಕಾರ‌ ನೀಡಿದರು. ನಲ್ವತ್ತೆರಡು ಶಿಬಿರಾರ್ಥಿಗಳಿಗೆ ಸಹನೆಯಿಂದ ವೇಷ ಭೂಷಣ ಮಾಡಿ ಯಶಸ್ಸಿಗೆ ಕಾರಣರಾದರು.
ವೇದಿಕೆಯ ಕಾರ್ಯದರ್ಶಿ ವರದೇಶ್ವರ ಭಟ್ಟ ಸ್ವಾಗತ ಮಾಡಿದರು. ಗಣಪತಿ ಹೆಗಡೆ ವಂದಿಸಿದರು. ಎಲ್ಲ ವೇದಿಕೆಯ ಸರ್ವ ಸದಸ್ಯರು, ಗ್ರಾಮಸ್ಥರು, ಶಾಲಾಭಿವೃದ್ದಿ‌ ಸಮಿತಿ ಸದಸ್ಯರು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top