• Slide
    Slide
    Slide
    previous arrow
    next arrow
  • ಅಬಕಾರಿ ಅಧಿಕಾರಿಗಳಿಂದ ದಾಳಿ: ಮದ್ಯ ಜಪ್ತಿ

    300x250 AD

    ಸಿದ್ದಾಪುರ: ತಾಲೂಕಿನ ಬೇಡ್ಕಣಿ- ಇಟಗಿ ರಸ್ತೆಯಲ್ಲಿರುವ ವಾಟಗಾರ್ ಕ್ರಾಸ್ ಬಳಿ, ಫೋರ್ಸ್ ತೂಫಾನ್ ಮ್ಯಾಕ್ಸಿ ಕ್ಯಾಬ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿತರ ಬಂಧಿಸಿದ್ದಾರೆ.  ಬಂಧಿತ ಆರೋಪಿಯು ಕ್ಯಾದಗಿ ಕಿರೆಕೋಡ ಮಂಜುನಾಥ ನಾಯ್ಕ ಆಗಿದ್ದ ಅವರನ್ನು ದಸ್ತಗೀರ್ ಮಾಡಿ, ಮೊಕದ್ದಮೆ ದಾಖಲಿಸಲಾಗಿದೆ.

    ಪಟ್ಟಣದಲ್ಲಿ ಸಿಬ್ಬಂದಿಗಳೊಂದಿಗೆ ಗಸ್ತು ನಡೆಸುತ್ತಿದ್ದಾಗ ಪಡೆದ ಖಚಿತ ಮಾಹಿತಿ ಮೇರೆಗೆ, ಸಿದ್ದಾಪುರ ತಾಲೂಕಿನ ಬೇಡ್ಕಣಿ- ಇಟಗಿ ರಸ್ತೆಯಲ್ಲಿರುವ ವಾಟಗಾರ್ ಕ್ರಾಸ್ ಬಳಿ, ಫೋರ್ಸ್ ತೂಫಾನ್ ಮ್ಯಾಕ್ಸಿ ಕ್ಯಾಬ್  ನೋಂದಣಿ ಸಂಖ್ಯೆ ಕೆಎ-15/ ಎ-1645 ರಲ್ಲಿ ಏಳು ರಟ್ಟಿನ ಪೆಟ್ಟಿಗೆಗಳಲ್ಲಿ 90 ಎಮ್.ಎಲ್. ಅಳತೆಯ 672 ಓರಿಜನಲ್ ಚಾಯ್ಸ್ ವಿಸ್ಕಿಯ ಟೆಟ್ರಾಪ್ಯಾಕ್ ಗಳನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ, ಸ್ವತ್ತುಗಳನ್ನು ಜಪ್ತುಪಡಿಸಿ, ಮೊಕದ್ದಮೆ ದಾಖಲಿಸಲಾಗಿದೆ. ಜಪ್ತುಪಡಿಸಿದ ವಾಹನದ ಅಂದಾಜು ಮೌಲ್ಯ ರೂ.8 ಲಕ್ಷಗಳು ಆಗಿದ್ದು, ಮದ್ಯದ ಮೌಲ್ಯ ರೂ./-23607 ಆಗಿರುತ್ತದೆ.

    300x250 AD

    ಅಬಕಾರಿ ಜಂಟಿ- ಆಯುಕ್ತರು ಮಂಗಳೂರು ವಿಭಾಗ ಮಂಗಳೂರು ಮತ್ತು ಮಾನ್ಯ ಅಬಕಾರಿ ಉಪಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದಲ್ಲಿ, ಅಬಕಾರಿ ಉಪ ಅಧಿಕ್ಷಕರು ಶಿರಸಿ ಉಪವಿಭಾಗ ಇವರ ಮಾರ್ಗದರ್ಶನದಂತೆ ಮಹೇಂದ್ರ ಎಸ್.ನಾಯ್ಕ ಅಬಕಾರಿ ನಿರೀಕ್ಷಕರು ಮೊಕದ್ದಮೆಯನ್ನು ದಾಖಲಿಸಿದ್ದು,  ಸಿಬ್ಬಂದಿಗಳಾದ ಎನ್.ಕೆ. ವೈದ್ಯ, ಲೋಕೇಶ್ವರ ಬೋರ್ಕರ್ ಹಾಗೂ ಗಜಾನನ ಎಸ್. ನಾಯ್ಕ ಇವರುಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top