• Slide
    Slide
    Slide
    previous arrow
    next arrow
  • ಸಿದ್ದಾಪುರ ಭಾಗದಲ್ಲಿ ಉಪೇಂದ್ರ ಪೈ ಮತಯಾಚನೆ

    300x250 AD

    ಸಿದ್ದಾಪುರ: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರವನ್ನು ಕೈಗೊಂಡಿದ್ದಾರೆ. ಮತದಾರರ ಮನೆಗಳಿಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.

    ತಾಲೂಕಿನ ಕಡಕೇರಿ, ಮುಗುದೂರು ಹಂಜಗಿ, ಹಿರೆಮಗ್ಗಿ ಅಳ್ಳಿಹೊಂಡ ಮೊದಲಾದ ಗ್ರಾಮಗಳಲ್ಲಿ  ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಉಪೇಂದ್ರ ಪೈರವರ ಪರ ಪ್ರಚಾರ ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಅಭ್ಯರ್ಥಿ ಉಪೇಂದ್ರ ಪೈ ಮಾತನಾಡಿ ಪಕ್ಷವು ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನವನ್ನು ತಿಂಗಳಿಗೆ 5000 ರೂಪಾಯಿಗೆ ಹೆಚ್ಚಿಸಲಿದೆ. ಪದವಿಯವರಿಗೆ ಉಚಿತ ಶಿಕ್ಷಣ ಮಾರಕ ಕಾಯಿಲೆಗಳಿಗೆ ಬಡವರಿಗೆ 10 ಲಕ್ಷದವರೆಗೆ ಸರ್ಕಾರದಿಂದ ವೆಚ್ಚ ಭರಿಸುವುದು ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ, ವಷÀðಕ್ಕೆ ಐದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ, 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ವ್ಯಕ್ತಿಗಳಿಗೆ ಪಿಂಚಣಿ.ಕೃಷಿ ಮಾಡುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 2 ಲಕ್ಷ ರೂ. ನೀಡುವುದಾಗಿ ಹೇಳಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಕಾನೂನು ತರುವುದಾಗಿಯೂ ಭರವಸೆ ನೀಡಿದೆ.ಈ ಎಲ್ಲಾ ಕಾರಣದಿಂದಾಗಿ ನಮ್ಮ ಪಕ್ಷಕ್ಕೆ ಮತವನ್ನು ನೀಡುವಂತೆ ವಿನಂತಿಸಿಕೊAಡರು.

    300x250 AD

    ಈ ಸಮಯದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ಸತೀಶ ಹೆಗಡೆ ಬೈಲಳ್ಳಿ, ಯುವ ಅಧ್ಯಕ್ಷರಾದ ಹರೀಶ ಗೌಡರ ಹರಳಿಕೊಪ್ಪ, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ರಾಜು ಗೊಂಡ ಅವರಗುಪ್ಪ ,ಮಾರುತಿ ನಾಯ್ಕ,ಪರಮೇಶ್ವರ ಹಿತ್ತಲಕೊಪ್ಪ ಮುಂತಾದ ಮುಖಂಡರಗಳು ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top