Slide
Slide
Slide
previous arrow
next arrow

ಅನುವಂಶೀಯ ಉಪಾಧಿವಂತ ಮಂಡಲದ ಕ್ಯಾಲೆಂಡರ್ ಬಿಡುಗಡೆ

300x250 AD

ಗೋಕರ್ಣ: ಅನುವಂಶೀಯ ಉಪಾಧಿವಂತ ಮಂಡಲದ ಕ್ಯಾಲೆಂಡರ್ ಪಂಚಾಂಗವನ್ನು ಶ್ರೀಶೃಂಗೇರಿ ಶಾರದಾ ಪೀಠಧೀಶ್ವರರಾದ ಜಗದ್ಗುರುಗಳು ವಿಧುಶೇಖರ ಭಾರತೀ ಪಾದಂಗಳು ಅಕ್ಷಯ ತೃತೀಯದ ಶುಭದಿನದಂದು ಶ್ರೀಕ್ಷೇತ್ರ ಶೃಂಗೇರಿಯ ಮಠದಲ್ಲಿ ಬಿಡುಗಡೆಗೊಳಿಸಿದರು.

ಈ ಕ್ಯಾಲೆಂಡರ್ ಪಂಚಾಂಗವು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಪಂಚ ಅಂಗಗಳಾದ ದಿನ,ತಿಥಿ, ನಕ್ಷತ್ರ, ಯೋಗ, ಕರಣ ಇವುಗಳನ್ನು ಆಂಗ್ಲ ದಿನಾಂಕದೊಂದಿಗೆ ಸಂಯೋಜಿಸಿ ಕ್ಯಾಲೆಂಡರ್ ರೂಪದಲ್ಲಿ ಪ್ರತಿಯೊಬ್ಬರೂ ಸರಳವಾಗಿ ಬಳಸುವಂತೆ ರಚಿಸಲಾಗಿರುತ್ತದೆ. ಗ್ರಹಣಗಳನ್ನು ಹಾಗೂ ಎಲ್ಲಾ ವಿವಿಧ ಧಾರ್ಮಿಕ ಮಹತ್ವದ ದಿನಗಳನ್ನು ಕ್ಯಾಲೆಂಡರ್ ರೂಪದಲ್ಲಿಯೇ ತಿಳಿದುಕೊಳ್ಳಬಹುದಾಗಿದೆ, ಹೋಮ ಹವನಗಳಿಗೆ ಬೇಕಾಗುವ ಅಗ್ನಿಯನ್ನು ಆಯಾ ದಿನದೊಂದಿಗೆ ಸಂಯೋಜಿಸಲಾಗಿದೆ ಎಂದು ಅನುವಂಶಿಯ ಉಪಾಧಿವಂತ ಮಂಡಳದ ಅಧ್ಯಕ್ಷರು ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕರು ಹಾಗೂ ತಂತ್ರಿಗಳಾದ ರಾಜಗೋಪಾಲ್ ಅಡಿ ಜಗದ್ಗುರುಗಳ ಗಮನಕ್ಕೆ ತಂದರು.

300x250 AD

ಇದೊಂದು ವಿಶಿಷ್ಟ ಪ್ರಯತ್ನವಾಗಿದ್ದು, ಸಾರ್ವಜನಿಕರು ಹಾಗೂ ಸನಾತನ ಧರ್ಮದ ಶ್ರದ್ಧಾಳುಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ಬಗ್ಗೆ ಶ್ರೀಗಳು ಅನುಗ್ರಹಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರ್ಚಕರು ಹಾಗೂ ಪ್ರಧಾನ ತಂತ್ರಿಗಳಲ್ಲಿ ಒಬ್ಬರಾದ ಶ್ರೀಗುರುದತ್ ಭಟ್ ಹಿರೆ, ಸಂಘದ ಸಂಚಾಲಕರಾದ ವೇ. ಪ್ರಸನ್ನ ಜೋಗಭಟ್, ಹರಿಹರೇಶ್ವರ ವೇದ ಪಾಠಶಾಲೆಯ ಅಧ್ಯಕ್ಷರಾದ ವೇ. ಉದಯ್ ಮಯ್ಯರ್, ನೇಪಾಳದ ಪಶುಪತಿನಾಥ ದೇವಾಲಯದ ಹಿಂದಿನ ಅರ್ಚಕರಾದ ವೇ.ಕೃಷ್ಣ ಜೋಗಭಟ, ಗೋಕರ್ಣದ ದಾಸನ ಮಠದ ಪ್ರತಿನಿಧಿಗಳಾದ ವೇ. ನರಸಿಂಹ ಶಾಸ್ತ್ರಿ,ನಾಡಕರ್ಣಿ ಕುಟುಂಬದ ಅಮಿತ್ ನಾಡಕರ್ಣಿ, ರವಿ ಜೋಗ್ ಭಟ್, ಪವನ್ ಗುನಗಾ, ಪಾಠಶಾಲಾ ವಿದ್ಯಾರ್ಥಿಗಳು, ಸದಸ್ಯರು ಉಪಸ್ಥಿತಿದ್ದರು.

Share This
300x250 AD
300x250 AD
300x250 AD
Back to top