ದಾಂಡೇಲಿ: ನಗರದ ಯುವ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದ ಕಾರ್ಯದರ್ಶಿ ಜೋಶಿ ಎಸ್.ಲಿಂಗಮ್ ಯಾನೆ ಸಮೀರ್ ಶೇಖ್ ಅವರು ತಮ್ಮ 18 ಜನ ಬೆಂಬಲಿಗರ ಜೊತೆ ಜೆಡಿಎಸ್ ಯುವ ನಾಯಕ ಶ್ರೀನಿವಾಸ್ ಘೋಟ್ನೇಕರ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸಮೀರ್ ಶೇಖ್ ಜೊತೆಗೆ ಅವರ ಬೆಂಬಲಿಗರಿಗೆ ಪಕ್ಷದ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡ ಶ್ರೀನಿವಾಸ ಘೋಟ್ನೇಕರ್ ಅವರು ಈ ಬಾರಿ ಜೆಡಿಎಸ್ ಪಕ್ಷದ ಗೆಲುವಿಗೆ ಒಂದಾಗಿ ಶ್ರಮಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕುಮಾರಣ್ಣನ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಕಾರ್ಯದರ್ಶಿ ಜೆಡಿಎಸ್ ಸೇರ್ಪಡೆ
