ಕಾರವಾರ: ತಾಲೂಕಿನ ಸಿದ್ದರದ ಮಲ್ಲಿಕಾರ್ಜುನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಶೇಕಡಾ 92ರಷ್ಟು ಫಲಿತಾಂಶ ದಾಖಲಿಸಿದ್ದಾರೆ.
ಕಲಾ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಮಲ್ಲಮ್ಮ ಮಾಗೋಡ 93.33% (560), ಪವಿತ್ರ ಸಿಗ್ಗಾವಿ 90.66% (544), ವಿದ್ಯಾ ಗಾಂವಕರ 90.16% (541), ಮಾನುಜಾ ಬಿರಂಗತ 89.16% (535), ಲತಿಕಾ ವೇಳಿಪ್ 88.5% (531) ಹಾಗೂ ಕೀರ್ತಿ ಕುನಬಿ 88% (528) ಪ್ರತೀಶತದಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಜ್ಯೋತಿ ಗುಡಿಯವರ 86.33% (518), ಗಣೇಶ್ ಗುಡಿಯವರ 76.33% (458), ಮಂಜುಳಾ ಗುಡಿಯವರ 451 (75.16%) ಮತ್ತು ಸುನೀತಾ ಲಮಾಣಿ 444 (74%) ಪ್ರತಿಶತ ಅಂಕಗಳನ್ನು ಗಳಿಸುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉನ್ನತ ಶ್ರೇಣಿಯಲ್ಲಿ ಒಟ್ಟು ಏಳು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಅತ್ಯಂತ ಉತ್ತಮ ಫಲಿತಾಂಶ ತಂದುಕೊಟ್ಟ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವನಿತಾ ರಾಣೆ, ಕಾರ್ಯದರ್ಶಿ ಎಸ್.ಆರ್.ನಾಯ್ಕ್, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸರ್ವಸದಸ್ಯರು, ಮಹಾವಿದ್ಯಾಲಯದ ಪ್ರಚಾರ್ಯ ಜಿ.ಡಿ.ಮನೋಜ್, ಸಿಬ್ಬಂದಿ ಪಿ.ಆರ್.ರಾಣೆ, ಅರ್ಚನಾ ಡಿ.ರಾಣೆ, ದಿನೇಶ್ ಜೆ.ರಾಣೆ, ಊರ ನಾಗರಿಕರು ಹಾಗೂ ಹಿತೈಷಿಗಳು ಆತ್ಮೀಯವಾಗಿ ಅಭಿನಂದಿಸಿ ಹಾರೈಸಿದ್ದಾರೆ.