ಭಟ್ಕಳ: ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ 268 ವಿದ್ಯಾರ್ಥಿಗಳಲ್ಲಿ 266 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಕಾಲೇಜು ಶೇಕಡಾ 99.25 ಫಲಿತಾಂಶವನ್ನು ದಾಖಲಿಸಿದೆ.
79 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರೆ, 124 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಹಾವಿದ್ಯಾಲಯವು 99.42% ಫಲಿತಾಂಶ ದಾಖಲಿಸಿದ್ದು, ಸಂಜನಾ ದೇವಾಡಿಗ 97.5% ನೊಂದಿಗೆ ಪ್ರಥಮ, ಜೀವೋತ್ತಮ ಎಮ್.ಕೆ. 96.83 % ಅಂಕಗಳೊAದಿಗೆ ದ್ವಿತೀಯ ಮತ್ತು ಅಶ್ವಿನಿ ನಾಯ್ಕ 96.5% ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಹಾವಿದ್ಯಾಲಯವು 100% ಫಲಿತಾಂಶ ದಾಖಲಿಸಿದ್ದು, ಮನೀಷಾ ಮೊಗೇರ 96.16% ಅಂಕಗಳೊಂದಿಗೆ ಪ್ರಥಮ, ನಮಿತಾ ನಾಯ್ಕ 95.5% ಅಂಕಗಳೊಂದಿಗೆ ದ್ವಿತೀಯ ಮತ್ತು ವಿನಾಯಕ ಎಸ್.ನಾಯ್ಕ 94.5%ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಮಹಾವಿದ್ಯಾಲಯವು 96% ಫಲಿತಾಂಶ ದಾಖಲಿಸಿದ್ದು, ಸವಿತಾ ಮರಾಠಿ 87.65% ಅಂಕಗಳೊಂದಿಗೆ ಪ್ರಥಮ, ರಂಜಿತಾ ನಾಯ್ಕ 85.16% ಅಂಕಗಳೊಂದಿಗೆ ದ್ವಿತೀಯ ಮತ್ತು ಮೊನಿಷಾ ಮೊಗೇರ 81.66% ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಜೀವೋತ್ತಮ ಎಮ್.ಕೆ., ಶ್ರೀನಿಧಿ ಭಟ್, ಧೀರಜ್ ಶೆಟ್ಟಿ ಲೆಕ್ಕಶಾಸ್ತ್ರ, ಕೃಪಾ ಕೆ.ನಾಯಕ, ಪ್ರಾಂಜಲ್ ಶಾನಭಾಗ, ವರಮಹಾಲಕ್ಷ್ಮೀ ಸಂಖ್ಯಾಶಾಸ್ತ್ರ, ಶ್ರೀಯಾ ಪುರಾಣಿಕ ಅರ್ಥಶಾಸ್ತ್ರ ಹಾಗೂ ಭಾವನಾ ಮೊಗೇರ, ನಿಹಾ ಜಿ.ಸಮ್ಮದ್, ಸಂಜನಾ ದೇವಾಡಿಗ, ತೇಜಸ್ವಿನಿ ನಾಯ್ಕ, ಹರ್ಷಿತಾ ಮೊಗೇರ, ನಮಿತಾ ನಾಯ್ಕ, ರಕ್ಷಿತಾ, ರಂಜಿತಾ ಕೊಲ್ಲೆ, ವಿನಾಯಕ ಎಸ್.ನಾಯ್ಕ, ಗಣಕ ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುರೇಶ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಆರ್.ಜಿ.ಕೊಲ್ಲೆ ಮತ್ತು ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲ ವಿರೇಂದ್ರ ವಿ.ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.