ಗೋಕರ್ಣ: ಇಲ್ಲಿನ ಹಿರೇಗುತ್ತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಒಟ್ಟು 247 ವಿದ್ಯಾರ್ಥಿಗಳಲ್ಲಿ 228 ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 92.30% ಫಲಿತಾಂಶ ದಾಖಲಾಗಿದೆ. ಕಾಲೇಜಿನ ಮೂರು ಸಂಯೋಜನೆಗಳಲ್ಲಿ ಒಟ್ಟೂ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ 109 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 106 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 97.24 ಫಲಿತಾಂಶ ದಾಖಲಾಗಿದೆ. 560 ಅಂಕ (ಶೇ 93.33) ಪಡೆದ ಎಂ.ದರ್ಶನ ಪ್ರಥಮ, ದ್ವಿತೀಯ ವಿಶಾಲ ಗೌಡ (542 ಅಂಕ, ಶೇ 90.33) ಹಾಗೂ ಕುಮುದಾ ಗೌಡ ತೃತೀಯ (535 ಅಂಕ, ಶೇ 89.16) ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 86 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 86 ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನವನ್ನು 581 ಅಂಕಗಳೊAದಿಗೆ ಶೇ 96.83 ಫಲಿತಾಂಶ ದಾಖಲಿಸಿದ ಶೃತಿ ಭಂಡಾರಿ, ದೀಪಿಕಾ ಗಾವಡಿ 578 ಅಂಕಗಳೊAದಿಗೆ ಶೇ 96.33 ಫಲಿತಾಂಶ ದಾಖಲಿಸಿ ದ್ವಿತೀಯ ಹಾಗೂ ನಾಗಶ್ರೀ ಗೌಡ 567 ಅಂಕಗಳೊAದಿಗೆ ಶೇ 94.5 ಫಲಿತಾಂಶ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 36 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 95 ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನ ಅನನ್ಯಾ ನಾಯಕ 560 ಅಂಕಗಳೊAದಿಗೆ ಶೇ 93.33 ಫಲಿತಾಂಶ, ದ್ವಿತೀಯ ಸ್ಥಾನ ಪ್ರತೀಕಾ ನಾಯ್ಕ 549 ಅಂಕಗಳೊAದಿಗೆ ಶೇ 91.5 ಹಾಗೂ ತೃತೀಯ ಓಂಕಾರ ಶಾನಭಾಗ 544 ಅಂಕಗಳೊAದಿಗೆ 90.66% ಫಲಿತಾಂಶ ಪಡೆದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕÀ ವೃಂದದವರು ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ.