ಹೊನ್ನಾವರ: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿನ 12 ಪದವಿಪೂರ್ವ ಕಾಲೇಜುಗಳಿಗೆ ವಿವಿಧ ವಿಭಾಗದ ಫಲಿತಾಂಶ ಲಭಿಸಿದೆ.
ತಾಲೂಕಿನಲ್ಲಿ 4 ಸರ್ಕಾರಿ ಪದವಿಪೂರ್ವ ಕಾಲೇಜು, 5 ಅನುದಾನಿತ ಹಾಗೂ 3 ಅನುದಾನ ರಹಿತ ಕಾಲೇಜುಗಳಿವೆ. ಕಲಾ ವಿಭಾಗದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಶೇ.83.62, ವಿಜ್ಞಾನ ವಿಭಾಗದಲ್ಲಿ ಶೇ. 95.8, ವಾಣಿಜ್ಯ ವಿಭಾಗದಲ್ಲಿ ಶೇ. 95 ಫಲಿತಾಂಶ ಗಳಿಸಿದೆ. ಅಳ್ಳಂಕಿ ಸರ್ಕಾರಿ ಪದವಿಪೂರ್ವ ಕಾಲೇಜು ಕಲಾ ವಿಭಾಗದಲ್ಲಿ ಶೇ.96.55, ವಿಜ್ಞಾನ ವಿಭಾಗದಲ್ಲಿ ಶೇ. 100, ವಾಣಿಜ್ಯ ವಿಭಾಗದಲ್ಲಿ ಶೇ. 98.43 ಫಲಿತಾಂಶ ಗಳಿಸಿದೆ. ಮಂಕಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರಿ ಪದವಿಪೂರ್ವ ಕಾಲೇಜು ಕಲಾ ವಿಭಾಗದಲ್ಲಿ ಶೇ. 93.50 ಫಲಿತಾಂಶ ಗಳಿಸಿದೆ.
ಇಡಗುಂಜಿ ಸರ್ಕಾರಿ ಪದವಿಪೂರ್ವ ಕಾಲೇಜು ಕಲಾ ವಿಭಾಗದಲ್ಲಿ ಶೇ.82, ವಿಜ್ಞಾನ ವಿಭಾಗದಲ್ಲಿ ಶೇ. 57, ವಾಣಿಜ್ಯ ವಿಭಾಗದಲ್ಲಿ ಶೇ. 91 ಫಲಿತಾಂಶ ಗಳಿಸಿದೆ. ಹಳದಿಪುರದ ಆರ್‌ಇಎಸ್ ಜಿಜೆಸಿ ಕಂಪೋಸಿಟ್ ಕಲಾ ವಿಭಾಗದಲ್ಲಿ ಶೇ. 57 ಫಲಿತಾಂಶ ಗಳಿಸಿದೆ. ಜನತಾ ವಿದ್ಯಾಲಯ ಪಿಯು ಕಾಲೇಜು ಕಲಾ ವಿಭಾಗದಲ್ಲಿ ಶೇ. 90.91 ಫಲಿತಾಂಶ ಗಳಿಸಿದೆ. ಕವಲಕ್ಕಿ ಎಸ್‌ಎಸ್‌ಸಿ ಪಿಯು ಕಾಲೇಜು ಕಲಾ ವಿಭಾಗದಲ್ಲಿ ಶೇ. 30.76 ಫಲಿತಾಂಶ ಗಳಿಸಿದೆ. ಎಂಪಿಇ ಸೊಸೈಟಿ ಎಸ್‌ಡಿಎಮ್ ಕಾಲೇಜು ಕಲಾ ವಿಭಾಗದಲ್ಲಿ ಶೇ. 96, ವಿಜ್ಞಾನ ವಿಭಾಗದಲ್ಲಿ ಶೇ. 99.32, ವಾಣಿಜ್ಯ ವಿಭಾಗದಲ್ಲಿ ಶೇ 86.62 ಫಲಿತಾಂಶ ಗಳಿಸಿದೆ.
ಅರೆಅಂಗಡಿ ಎಸ್‌ಕೆಪಿ ಪಿಯು ಕಾಲೇಜು ಕಲಾ ವಿಭಾಗದಲ್ಲಿ ಶೇ. 67, ವಾಣಿಜ್ಯ ವಿಭಾಗದಲ್ಲಿ ಶೇ. 90 ಫಲಿತಾಂಶ ಗಳಿಸಿದೆ. ಶ್ರೀ ಶಾರದಾಂಬಾ ಪಿಯು ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 68 ಫಲಿತಾಂಶ ಗಳಿಸಿದೆ. ಹೋಲಿ ರೋಸರಿ ಕಾನ್ವೆಂಟ್ ಕಂಪೋಸಿಟ್ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ. 100, ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಗಳಿಸಿದೆ. ಅಲ್- ಹಿಲಾಲ್ ಪ್ರಿ- ಯೂನಿವರ್ಸಿಟಿ ಬಾಲಕಿಯರ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 94.11 ಫಲಿತಾಂಶ ಗಳಿಸಿದೆ.