ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕತ್ವ ಆಯ್ಕೆ ಬಯಸಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ!
ಮಾಜಿ ಶಾಸಕ ವಿ ಎಸ್ ಪಾಟೀಲ್ ಹಾಗೂ ಕಾಂಗ್ರೆಸ್ ಮುಖಂಡ ಲಕ್ಷö್ಮಣ ಬನ್ಸೋಡೆ ಇಬ್ಬರೂ `ಇಂಡಿಯನ್ ನ್ಯಾಶನಲ್ ಕಾಂಗ್ರೆಸ್’ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಲಕ್ಷ್ಮಣ ಬನ್ಸೋಡೆ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಏ.18ರಂದು ಲಕ್ಷ್ಮಣ ಬನ್ಸೋಡೆ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ನಿಯಮಗಳಲ್ಲಿ ಅವಕಾಶವಿರುವಂತೆ ಬಿ ಫಾರಂ ಒದಗಿಸಲು ಸಮಯ ಪಡೆದಿದ್ದರು. ಆದರೆ, ಅದೇ ದಿನ ವಿ.ಎಸ್.ಪಾಟೀಲ್ ಅವರು ಬಿ ಫಾರಂ ಜೊತೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ಹಿನ್ನಲೆ ಲಕ್ಷ್ಮಣ ಬನ್ಸೋಡೆ ಅವರು ಏ.20ರಂದು ಸ್ವತಂತ್ರ ಅಭ್ಯರ್ಥಿ ಎಂದು ನಮೂದಿಸಿ ಇನ್ನೊಂದು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಬಿಡುಗಡೆ ಮಾಡಿದ ದಾಖಲೆ ಹಾಗೂ ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ಲಕ್ಷ್ಮಣ ಬನ್ಸೋಡೆ ಅವರು ಸಹ ಕಾಂಗ್ರೆಸ್ ಅಭ್ಯರ್ಥಿ ಎಂದೇ ಇದೆ.
ಯಲ್ಲಾಪುರ ಕಾಂಗ್ರೆಸ್‌ಗೆ ಇಬ್ಬರು ಅಭ್ಯರ್ಥಿಗಳು!
