• Slide
  Slide
  Slide
  previous arrow
  next arrow
 • ದೇಶಪಾಂಡೆಯವರಿಂದಾಗಿ ದಾಂಡೇಲಿ ಶರವೇಗದಲ್ಲಿ ಬೆಳೆಯುತ್ತಿದೆ: ಪ್ರಸಾದ್

  300x250 AD

  ದಾಂಡೇಲಿ: ಕಳೆದ 40 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಶಾಸಕರಾಗಿ, ಸಚಿವರಾಗಿ ಆರ್.ವಿ.ದೇಶಪಾಂಡೆಯವರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಫಲವಾಗಿ ನಗರ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುವಂತಾಗಿದೆ. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆಯಡಿ ದೇಶಪಾಂಡೆಯವರು ಕೆಲಸ ನಿರ್ವಹಿಸಿದ್ದಾರೆ ಎಂದು ಆರ್‌ವಿಡಿ ಪುತ್ರ ಪ್ರಸಾದ್ ದೇಶಪಾಂಡೆ ಹೇಳಿದರು.
  ನಗರದ ಬ್ಲಾಕ್ ಕಾಂಗ್ರೆಸ್ ಕರ‍್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆರ್.ವಿ.ದೇಶಪಾಂಡೆಯವರು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಹಿನ್ನಲೆಯಲ್ಲಿ ಅವರಿಗೆ ರಾಜ್ಯದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಬಂದಿದೆ. ದಾಂಡೇಲಿಯ ಜನತೆಯ ಬಹುವರ್ಷಗಳ ಬೇಡಿಕೆಯಾದ 24*7 ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿದ್ದಾರೆ. ಇವೆಲ್ಲವುಗಳನ್ನು ಪಕ್ಷದ ಕರ‍್ಯಕರ್ತರು ಪ್ರತಿ ಮನೆ ಮನೆಗಳಿಗೆ ತಿಳಿಸುವ ಮೂಲಕ ಆರ್.ವಿ.ದೇಶಪಾಂಡೆಯವರ ಐತಿಹಾಸಿಕ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸುವಂತೆ ಮನವಿ ಮಾಡಿದರು.
  ಹಿರಿಯರಾದ ಟಿ.ಆರ್.ಚಂದ್ರಶೇಖರ್ ಮಾತನಾಡಿ, ಆರ್.ವಿ.ದೇಶಪಾಂಡೆಯವರು ಬಹುದೊಡ್ಡ ಶಕ್ತಿ, ನಮ್ಮ ಕ್ಷೇತ್ರದ ಶಕ್ತಿ ಮಾತ್ರವಲ್ಲ ಅವರು ಇಡೀ ರಾಜ್ಯಕ್ಕೂ ದೊಡ್ಡ ಶಕ್ತಿಯಾಗಿದ್ದಾರೆ. ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕರ‍್ಯಗಳನ್ನು ನೋಡಿದ ನಾವು ನೀವೆಲ್ಲರೂ ನಾವಷ್ಟೆ ಅಲ್ಲದೇ ನಗರದ ಜನತೆಯ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸುವ ಮೂಲಕ ಆರ್.ವಿ.ದೇಶಪಾಂಡೆಯವರು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆಯವರು ಮಾತನಾಡಿ, ದಾಂಡೇಲಿ ನಗರ ಹಾಗೂ ತಾಲೂಕಿಗೆ ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ‍್ಯಗಳನ್ನು ವಿವರಿಸಿದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಆರ್.ಪಿ.ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ್, ಇಕ್ಬಾಲ್ ಶೇಖ್, ಮೋಹನ ಹಲವಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನ ವಹಾಬ್ ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷದ ಮುಖಂಡರು, ಕಾರ‍್ಯಕರ್ತರು ಭಾಗವಹಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top