ಹೊನ್ನಾವರ: ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ತಾಲೂಕಿನ ಗುಣವಂತೆ ಶಂಭುಲಿಂಗ ದೇವರ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಹಿನ್ನಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪುಷ್ಪರಥೋತ್ಸವ, ಮಹಾ ರಥೋತ್ಸವ ವಿಜೃಂಭಣೆಯಿಂದ ನೇರವೇರಿತು. ಭಕ್ತಾಧಿಗಳು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಆಡಳಿತ ಕಮಿಟಿಯ ಸದಸ್ಯ ಎಮ್.ಎಸ್.ಹೆಗಡೆ ಮಾತನಾಡಿ, ಗುಣವಂತೆಯ ಜಾತ್ರೆ ರಾಜ್ಯಾದ್ಯಂತ ಪ್ರಸಿದ್ದಿ ಪಡೆದಿದೆ. ಈ ರಥೋತ್ಸವಕ್ಕೆ ರಾಜ್ಯದ ವಿವಿಧಡೆಯಿಂದ ಭಕ್ತರು ಶೃದ್ದಾ ಭಕ್ತಿಯಿಂದ ಭಾಗವಹಿಸುತ್ತಾರೆ. ದೇವಸ್ಥಾನವನ್ನು ಜಿರ್ಣೊದ್ದಾರ ಮಾಡಬೇಕಿದ್ದು ದೇವಾಲಯದ ಗರ್ಭಗುಡಿಯನ್ನು ಶಿಲಾಮಯ ಮಾಡಬೇಕು. ಕಲ್ಯಾಣ ಮಂಟಪವನ್ನು ಸುಂದರವಾಗಿ ನಿರ್ಮಿಸುವ ಯೋಜನೆಯು ಇದೆ. ಅಂದಾಜು 10 ಕೋಟಿ ಆಗುವ ಸಾಧ್ಯತೆಯಿದೆ. ಭಕ್ತರು ಸಹಾಯ ಸಹಕಾರ ನೀಡಿ ಶಂಭುಲಿಂಗೇಶ್ವರನ ಕೃಪೆಗೆ ಪಾತ್ರರಾಗಿ ಎಂದರು.