• Slide
    Slide
    Slide
    previous arrow
    next arrow
  • ಶಾಸಕ ದೇಶಪಾಂಡೆಗೆ ಸನ್ಮಾನ

    300x250 AD

    ದಾಂಡೇಲಿ: ನಗರದ ಡಿ.ಎಫ್‌ಎ ಟೌನಶಿಪ್‌ನಲ್ಲಿರುವ ಸಿಎಸ್‌ಐ ಚರ್ಚಿನಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಆರ್.ವಿ.ದೇಶಪಾಂಡೆಯವರನ್ನು ಸಿ.ಎಸ್‌ಐ ಚರ್ಚ್ ನ ಆಡಳಿತ ಮಂಡಳಿ ಹಾಗೂ ಕ್ರೈಸ್ತರ ಪರವಾಗಿ ಚರ್ಚ್ ನ ಧರ್ಮಗುರುಗಳಾದ ಶಾಂತರಾಜ್ ವೈ.ಕುರಿ ಹಾಗೂ ಮತ್ತಿತರರು ಸನ್ಮಾನಿಸಿದರು.
    ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಪ್ರತಿನಿಧಿಯಾದವನಿಗೆ ಬದ್ಧತೆ ಮತ್ತು ಸಿದ್ದತೆಗಳಿರಬೇಕು. ಒಂದು ಸ್ಪಷ್ಟವಾದ ದೂರದೃಷ್ಟಿಯಿದ್ದಾಗ ಮಾತ್ರ ಸರಕಾರದ ಯೋಜನೆಗಳನ್ನು ಕ್ಷೇತ್ರಕ್ಕೆ ತರುವುದರ ಜೊತೆಗೆ ಅದರ ಸಮರ್ಪಕ ಸದ್ವಿನಿಯೋಗ ಮಾಡಲು ಸಾಧ್ಯವಿದೆ. ಒಂದು ಸಮಯದಲ್ಲಿ ಕೈಗಾರಿಕಾ ನಗರಿಯೆಂದೆ ಗುರುತಿಸಿಕೊಂಡಿದ್ದ ದಾಂಡೇಲಿ ಪ್ರವಾಸಿ ನಗರವಾಗಿಯೂ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ ಈ ಭಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಇದು ಸಾಧ್ಯವಾಗಿದೆ. ಪ್ರವಾಸೋದ್ಯಮದ ಪ್ರಗತಿಯಿಂದ ಉದ್ಯೋಗ ಸೃಷ್ಟಿಯೂ ಆಗಿದೆ. ಪ್ರವಾಸೋದ್ಯಮದ ಬಗ್ಗೆ ಸ್ಪಷ್ಟವಾದ ಕಲ್ಪನೆಯಿಟ್ಟು ಯೋಜನೆಗಳನ್ನು ತಂದ ಫಲವಾಗಿ ಇಂದು ಜಾಗತಿಕ ಮಟ್ಟದಲ್ಲಿ ದಾಂಡೇಲಿ ಗುರುತಿಸುವಂತಾಗಿದೆ ಎಂದರು.
    ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಹಾಗೂ ಮೂಲಸೌರ‍್ಯಗಳ ಅಭಿವೃದ್ದಿಗೂ ವಿಶೇಷ ಆಧ್ಯತೆಯಡಿ ಕೆಲಸ ನಿರ್ವಹಿಸಲಾಗಿದೆ. ದೇವಸ್ಥಾನ, ಮಸೀದಿ, ಮಂದಿರ, ಚರ್ಚ್ ಗಳ ನವೀಕರಣ, ನಿರ್ಮಾಣಕ್ಕೂ ಅನುದಾನವನ್ನು ತರಲಾಗಿದೆ. ಕೇವಲ ಸರಕಾರದಿಂದ ಅನುದಾನವನ್ನು ತಂದಿರುವುದಷ್ಟೆ ಅಲ್ಲದೇ ಸಿಎಸ್‌ಆರ್ ಯೋಜನೆಯ ಮೂಲಕ ಅನೇಕ ಕಾರ‍್ಯಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಪಡಿಸಲಾಗಿದೆ. ನೀವು ನೀಡಿದ ಒಂದೊಂದು ಮತಕ್ಕೂ ಗೌರವವನ್ನು ನೀಡಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇನೆ ಎಂದರು. ಅಭಿವೃದ್ಧಿ ಕಾರ‍್ಯವನ್ನು ನೋಡಿ ಅಮೂಲ್ಯ ಮತವನ್ನು ಚಲಾಯಿಸುವಂತೆ ಈ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆಯವರು ಮನವಿ ಮಾಡಿದರು.
    ಸಿಎಸ್‌ಐ ಚರ್ಚ್ ನ ಧರ್ಮಗುರುಗಳಾದ ಶಾಂತರಾಜ್ ವೈ.ಕುರಿ ಮಾತನಾಡಿ, ಆರ್.ವಿ.ದೇಶಪಾಂಡೆಯವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಬಂದಿರುವುದು ನಮಗೆಲ್ಲ ಅತ್ಯಂತ ಗೌರವ ಸಂಗತಿ. ರಾಜಕೀಯವಾಗಿ ಇನ್ನೂ ಉತ್ತಮ ಕೀರ್ತಿ ಲಭಿಸಲೆಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರಸಾದ್ ದೇಶಪಾಂಡೆ, ಮುಖಂಡರಾದ ಮುನ್ನ ವಹಾಬ್ ಮೊದಲಾದವರು ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಸಿಎಸ್‌ಐ ಚರ್ಚ್ ನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top