Slide
Slide
Slide
previous arrow
next arrow

ಅಜಿತ ಮನೋಚೇತನಾಕ್ಕೆ ಪರ್ತಗಾಳಿ ಸ್ವಾಮೀಜಿ ಭೇಟಿ

300x250 AD

ಶಿರಸಿ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಗಳು ಅಜಿತ ಮನೋಚೇತನಾ ಸಂಸ್ಥೆಗೆ ಭೇಟಿ ನೀಡಿದರು.
ಮಾನಸಿಕ ಆರೋಗ್ಯ ತಪಾಸಣಾ ಶಿಬಿರಗಳು, ವಿಕಲಚೇತನ ಮಕ್ಕಳ ಶಿಕ್ಷಣ, ಕಲಿಕಾ ವಿಧಾನ, ಯೋಗ, ಸಂಗೀತ, ದಿನಚರಿ ಬಗ್ಗೆ ಶಿಕ್ಷಕರ ಜೊತೆ ಮಾಹಿತಿ ಪಡೆದರು. ಬುದ್ದಿಮಾಂದ್ಯತೆ, ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ಕೇಳಿದರು. ಪಾಲಕರು ಸಂಸ್ಥೆಯ ಪದಾಧಿಕಾರಿಗಳ ಜೊತೆ ವಿಕಾಸ ಶಾಲೆ ನಿರ್ವಹಣೆ ಬಗ್ಗೆ ಸಂವಾದ ನಡೆಸಿದರು. ವಿಶೇಷ ಮಕ್ಕಳ ಗೀತಾಪಠಣ ಕೇಳಿದರು. ವಿಕಲಚೇತನರ ಏಳ್ಗೆಗಾಗಿ 25 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಜಿತ ಮನೋಚೇತನಾ ಸಂಸ್ಥೆಗೆ ಸಮಾಜವು ಆರ್ಥಿಕ ನೆರವು ನೀಡುವಂತೆ ಕರೆಕೊಟ್ಟರು. ನಾವೂ ಈ ಮಾನವೀಯ ಸೇವೆಯನ್ನು ಬೆಂಬಲಿಸುವುದಾಗಿ ಸ್ವಾಮೀಜಿಯವರು ಪ್ರಕಟಿಸಿದರು. ಪರ್ತಗಾಳಿ ಸ್ವಾಮೀಜಿ ಇವರು ವಿಶೇಷ ಮಕ್ಕಳು, ಶಿಕ್ಷಕರು, ಪಾಲಕರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಪರ್ತಗಾಳಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ್ ಇವರು ರಜತ ಮಹೋತ್ಸವ ವರ್ಷದ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡುತ್ತಾ ಸ್ವಾಮೀಜಿ ಅವರ ಕಾಳಜಿ ಬಗ್ಗೆ ಶ್ಞಾಘನೆ ಮಾಡಿದರು. ಈ ಸಂದರ್ಭದಲ್ಲಿ ವಿಷ್ಣುದಾಸ ಕಾಸರಕೋಡ, ನಿತಿನ ಕಾಸರಕೋಡ, ಉದಯ ಸ್ವಾದಿ, ಮುಖ್ಯಾಧ್ಯಾಪಕಿ ನರ್ಮದಾ ಹೆಗಡೆ ಹಾಗೂ ಇನ್ನಿತರರು ಪಾಲ್ಗೊಂಡರು.

300x250 AD
Share This
300x250 AD
300x250 AD
300x250 AD
Back to top